ಮಂಜೇಶ್ವರ: ಭಾರತದ ಅತೀ ದೊಡ್ಡ ಕೃಷಿ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಕ್ಯಾಂಪ್ಕೋ ಮಂಗಳೂರು ಸಂಸ್ಥೆಯ ನಿರ್ದೇಶಕರಾಗಿ ಇತ್ತೀಚೆಗೆ ಆಯ್ಕೆಯಾದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಯವರಿಗೆ ಚಿಗುರುಪಾದೆ ದೇವಸ್ಥಾನದ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಗಣ್ಯರ ಸಮಕ್ಷಮ ಹುಟ್ಟೂರ ಸನ್ಮಾನ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಕ್ಷೇತ್ರದ ಸೇವಾಸಮಿತಿ ಅಧ್ಯಕ್ಷರೂ ಧಾರ್ಮಿಕ ನೇತಾರ ಡಾ.ಶ್ರೀಧರ ಭಟ್ ಎಂ ವಹಿಸಿದ್ದರು. ಶ್ರೀ ಸಾಯಿ ಸೇವಾ ಪ್ರತಿಷ್ಠಾನ ಟ್ರಸ್ಟ್ ದೈಗೋಳಿ ಸಂಸ್ಥೆಯ ಸಂಸ್ಥಾಪಕ ಡಾ.ಉದಯಕುಮಾರ್ ಭಟ್ ನೂಜಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಕ್ಯಾಂಪ್ಕೋ ಮಂಗಳೂರು ಸಂಸ್ಥೆಯ ಮಾಜಿ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಭಾಗವಹಿಸಿ ಶುಭಾಶಂಸನೆ ಗೈದರು.
ಸಮಾರಂಭದಲ್ಲಿ ಮಹಾಲಿಂಗೇಶ್ವರ ಸೇವಾಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಸೇವಟ್ರಸ್ಟ್ ಉಪಾಧ್ಯಕ್ಷ ಗೋಪಾಲಕೃಷ್ಣ ಎಸ್, ಮಹಿಳಾ ಸಮಿತಿ ಅಧ್ಯಕ್ಷೆ ಜಯಲಕ್ಷ್ಮಿ ಶೆಟ್ಟಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೌರವಾದರಗಳನ್ನು ಪಡೆದ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಧಾಕೃಷ್ಣ ರಾವ್ ಕೊಣಾಜೆ, ಸಾಲಿಗ್ರಾಮ ದೇವಸ್ಥಾನದ ಹೊರನಾಡು ವಿಭಾಗದಿಂದ ಮೊಕ್ತೇಸರರಾಗಿ ಆಯ್ಕೆಯಾದ ಶ್ರೀಧರರಾವ್ ಆರ್ ಎಂ, ದಕ್ಷಿಣ ವಲಯ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ ಶೆಟ್ಟಿ ಎಲಿಯಾಣ, ಶ್ರೀಮತಿ ಅನಿತ ಮೀಯಪದವು ಅವರನ್ನು ಗೌರವಿಸಲಾಯಿತು.
ಪ್ರಥಮ್ ಶೆಟ್ಟಿ ತಲೇಕಳ ಪ್ರಾರ್ಥನೆಗೈದರು.ಶ್ರೀ ಮಹಾಲಿಂಗೇಶ್ವರ ಸೇವಾಟ್ರಸ್ಟ್‍ನ ಕೋಶಾಧಿಕಾರಿ ಜಗದೀಶ ಶೆಟ್ಟಿ ಎಲಿಯಾಣ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ರಾಜಾರಾಮ ರಾವ್ ಮೀಯಪದವು ಅಭಿನಂದನಾ ಭಾಷಣ ಗೈದರು. ಸೇವಾಟ್ರಸ್ಟ್ ಕಾರ್ಯದರ್ಶಿ ಶ್ರೀಧರ ರಾವ್ ಆರ್ ಎಂ ವಂದಿಸಿದರು. ಆಧ್ಯಾಪಕ ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.





