ಕಾಸರಗೋಡು: ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಚಿಸಿರುವ ಸಾಂತ್ವನ ಸ್ಪಶರ್ಂ ಅದಾಲತ್ ಸೋಮವಾರ ಕಾಞಂಗಾಡಿನಲ್ಲಿ ಜರುಗಿತು.
ಹೊಸದುರ್ಗ ಮಿನಿ ಸಿವಿಲ್ ಸ್ಟೇಷನ್ ನಲ್ಲಿ ಜರುಗಿದ ಅದಾಲತ್ ಗೆ ಸಚಿವರಾದ ಇ.ಚಂದ್ರಶೇಖರನ್, ಕಡನ್ನಪಳ್ಳಿ ರಾಮಚಂದ್ರನ್, ಕೆ.ಕೆ.ಶೈಲಜಾ ಟೀಚರ್ ಜಂಟಿಯಾಗಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಜನತೆಯ ಅನೇಕ ವರ್ಷಗಳ ದೂರುಗಳಿಗೆ ತೀವ್ರಗತಿಯಲ್ಲಿ ಪರಿಹಾರ ಒದಗಿಸುವಲ್ಲಿ ರಾಜ್ಯ ಸರಕಾರ ಬದ್ಧವಾಗಿದೆ ಎಂದರು.
ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅವರು ಮಾತನಾಡಿ ಜನತೆಯ ದೂರುಗಳನ್ನು ಜಿಲ್ಲಾಡಳಿತೆಯ ನೇತೃತ್ವದಲ್ಲಿ ಪರಿಶೀಲಿಸಿ, ಅಗತ್ಯದ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಹಲವು ತಾಂತ್ರಿಕ ಕಾರಣಗಳಿಂದ ಪರಿಹಾರ ದೊರೆಯದೇ ಉಳಿದಿರುವ ದೂರುಗಳಿಗೆ ಶಾಶ್ವತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಾಂತ್ವ ಸ್ಪಶರ್ಂ ಅದಾಲತ್ ನಡೆಸಲಾಗಿದೆ ಎಂದು ನುಡಿದರು.
ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಅವರು ಮಾತನಾಡಿ ನೊಂದ ಜನತೆಯ ಮನಸ್ಸಿಗೆ ಸಾಂತ್ವನ ಸ್ಪರ್ಶ ನೀಡುವ ಅದಾಲತ್ ಆಗಿರಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾಳಜಿ ವಹಿಸಿದೆ ಎಂದು ಹೇಳಿದರು.
ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿದ್ಧಪಡಿಸಿರುವ ಅಭಿವೃದ್ಧಿ ಸಪ್ಲಿಮೆಂಟ್ "ಇನ್ನೂ ಮುಂದಡಿ" ಕೃತಿಯನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಶಾಸಕರಾದ ಎಂ.ರಾಜಗೋಪಾಲನ್, ಕೆ.ಕುಂಞÂ್ಞ ರಾಮನ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಆನಂದ್ ಸಿಂಗ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕಾಞಂಗಾಡ್ ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ, ಉಪಜಿಲ್ಲಾಧಿಕಾರಿ ಮೇಘಶ್ರೀ, ಜಿಲ್ಲಾ ಮಟ್ಟದ ಸಿಬ್ಬಂದಿ, ತಹಸೀಲ್ದಾರರು ಉಪಸ್ಥಿತರಿದ್ದರು.
ಆನ್ ಲೈನ್ ರೂಪದಲ್ಲಿ ಲಭಿಸಿದುದು 4651 ದೂರುಗಳು:
ಸೋಮವಾರ ಕಾಞಂಗಾಡಿನಲ್ಲಿ ಜರುಗಿದ ಸಾಂತ್ವ ಸ್ಪಶರ್ಂ ಅದಾಲತ್ ಗೆ ಆನ್ಲೈನ್ ರೂಪದಲ್ಲಿ 4651 ದೂರುಗಳು ಲಭಿಸಿದ್ದುವು. ಜ.27ರಿಂದ ಫೆ.2 ವರೆಗೆ ದೂರು ಸಲ್ಲಿಸುವ ಅವಕಾಶ ನೀಡಲಾಗಿತ್ತು. ಇವುಗಳಲ್ಲಿ ನಿಗದಿ ಪಡಿಸಲಾದ ದೂರುಗಳಲ್ಲಿ ಮಾತ್ರ ದೂರುದಾತರು ಅದಾಲತ್ ಗೆ ಹಾಜರಾಗಲು ಅವಕಾಶ ನೀಡಲಾಗಿತ್ತು. ಕೋವಿಡ್ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಿ ಅದಾಲತ್ ಜರುಗಿತ್ತು.
ಪ್ರತ್ಯೇಕ ಕೌಂಟರ್ ಗಳು:
ಸಾತ್ವನ ಸ್ಪಶರ್ಂ ಅದಾಲತ್ ವೇಳೆ ದೂರು ಸಲ್ಲಿಕೆಗೆ ಹೊಸದುರ್ಗ ಮಿನಿ ಸಿವಿಲ್ ಸ್ಟೇಷನ್ ನಲ್ಲಿ ಪ್ರತ್ಯೇಕ ಕೌಂಟರ್ ಗಳನ್ನು ಏರ್ಪಡಿಸಲಾಗಿತ್ತು. ಗ್ರಾಮ ಕಚೇರಿಗೆ ಸಂಬಂಧಿಸಿದ ದೂರುಗಳಿಗೆ ವಿಲ್ಲೇಜ್ ಕೌಂಟರ್, ಸಿವಿಲ್ ಸಪ್ಲೈಸ್, ನೋರ್ಕಾ ರೂಟ್ಸ್, ಕೆ.ಎಸ್.ಇ.ಬಿ., ಕೆ.ಎಸ್.ಆರ್.ಟಿ.ಸಿ., ಪರಿಶೀಷ್ಟ ಜಾತಿ-ಪಂಗಡ ಇಲಾಖೆಗಳು, ಹೆಲ್ಪ್ ಡೆಸ್ಕ್, ಪೋಲೀಸ್, ವೆಳ್ಳರಿಕುಂಡ್ ತಾಲೂಕು, ಹೊಸದುರ್ಗ ತಾಲೂಕು ಎಂಬ ಪ್ರತ್ಯೇಕ ಕೌಂಟರ್ ಗಳನ್ನು ಸಿದ್ಧಪಡಿಸಲಾಗಿತ್ತು. ಜೊತೆಗೆ ದೂರು ಸಲ್ಲಿಕೆ ಅಕ್ಷಯ ಕೇಂದ್ರ ಸೇವೆಯೂ ಇತ್ತು.





