HEALTH TIPS

ಇಂದು ಮಾವಿಲ ಕಡಪ್ಪುರಂ ಬೋಟ್ ಜಟ್ಟಿ ಉದ್ಘಾಟನೆ

      ಕಾಸರಗೋಡು: ಮಾವಿಲ ಕಡಪ್ಪುರಂ ಬೋಟ್ ಜಟ್ಟಿಯ ಉದ್ಘಾಟನೆ ಇಂದು ನಡೆಯಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಮುಜರಾಯಿ ಸಚಿವ ಅಧ್ಯಕ್ಷತೆ ವಹಿಸುವರು. 

        ಉತ್ತರ ಕೇರಳದ ಗ್ರಾಮೀಣ ಜೀವನವನ್ನು ಸಮೀಪದಿಂದ ದರ್ಶಿಸುವ ನಿಟ್ಟಿನಲ್ಲಿ ಕಾಸರಗೋಡು-ಕಣ್ಣೂರು ಜಿಲ್ಲೆಗಳ ನದಿ, ಹಿನ್ನೀರು ಗಳಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರಸ್ತುತಪಡಿಸುವ ಪ್ರವಾಸ-ವಿಜ್ಞಾನ ಯೋಜನೆ ಮಲೆನಾಡು ಮಲಬಾರ್ ರಿವರ್ ಕ್ರೂಯಿಸ್ ಟೂರಿಸಂ ಯೋಜನೆ ಅಂಗವಾಗಿ ನಿರ್ಮಿಸಲಾದ ಜಟ್ಟಿ ಈ ಮೂಲಕ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಎಂ.ರಾಜಗೋಪಾಲನ್ ತಿಳಿಸಿದರು. 

       ಕಣ್ಣೂರು ಜಿಲ್ಲೆಯ ಪರರ್ಶಶಿನಿಕಡವಿನಿಂದ ಕಾಸರಗೋಡು ಜಿಲ್ಲೆಯ ಕೋಟ್ಟಪ್ಪುರಂ ವರೆಗೆ ಸುಗಮ ಜಲಯಾತ್ರೆಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಚಟುವಟಿಕೆಗಳಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಪ್ರಥಮ ಯೋಜನೆ ಮಾವಿಕಲ ಕಡಪ್ಪುರಂ ಬೋಟ್ ಜಟ್ಟಿಯಾಗಿದೆ. 2 .92 ಕೋಟಿ ರೂ. ವೆಚ್ಚದಲ್ಲಿ ವಲಿಯಪರಂಬ ಗ್ರಾಮ ಪಂಚಾಯತ್ ನಲ್ಲಿ ಇದರ ನಿರ್ಮಾಣ ನಡೆದಿದೆ. ಹಿನ್ನೀರು ಮತ್ತು ಸಮುದ್ರ ಮಧ್ಯೆ ಇರುವ ಗ್ರಾಮ ಪಂಚಾಯತ್ ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಈ ನಿರ್ಮಾಣ ಪೂರಕವಾಗಲಿದೆ. ಇದೇ ಪಂಚಾಯತ್ ನ ಮಾಡಕ್ಕಾಲ್ ಪ್ರದೇಶದಲ್ಲೂ ಬೋಟ್ ಜಟ್ಟಿ ನಿರ್ಮಾಣ ಪ್ರಗತಿಯಲ್ಲಿದೆ. ನೀಲೇಶ್ವರ ನಗರಸಭೆಯ ಕೋಟ್ಟಪ್ಪುರಂ ನಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಹೌಸ್ ಬೋಟ್ ಟರ್ಮಿನಲ್ ಜಾರಿಗೊಳ್ಳುವ ಮೂಲಕ ತೇಜಸ್ವಿನಿ ನದಿಯಿಂದ ವಲಿಯಪರಂಬ ಹಿನ್ನೀರಿನ ವರೆಗೆ ವಿಸ್ತರಿಸುವ ಮಲಬಾರ್ ಹಿನ್ನೀರು ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ನೂತನ ಅಧ್ಯಾಯವಾಗಲಿದೆ ಎಂದು ಶಾಸಕ ತಿಳಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries