ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧದ ಲಾವಲಿನ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಪರಿಗಣಿಸುತ್ತಿರುವ ದಿನವೇ ಕೇರಳದಲ್ಲಿ ಮತದಾನ ನಡೆಯಲಿದೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಿದಾಗ ಏಪ್ರಿಲ್ 6 ಕ್ಕೆ ಮುಂದೂಡಿತ್ತು. ಸಿಬಿಐ ವಾದಗಳನ್ನು ಪರಿಗಣಿಸಿ ಪ್ರಕರಣವನ್ನು ಮುಂದೂಡಲಾಯಿತು. 26 ನೇ ಬಾರಿಗೆ ಮುಂದೂಡಲಾಗಿರುವ ಈ ಪ್ರಕರಣವನ್ನು ಚುನಾವಣಾ ದಿನ ನ್ಯಾಯಾಲಯ ಪರಿಗಣಿಸುತ್ತಿರುವುದು ವಿಶೇಷವಾಗಿದೆ.
ಕೇರಳ ಚುನಾವಣೆಗೆ ಸಜ್ಜಾಗುತ್ತಿರುವಂತೆ ಸುಪ್ರೀಂ ಕೋರ್ಟ್‍ನ ಕ್ರಮ ರಾಜಕೀಯವಾಗಿ ನಿರ್ಣಾಯಕವಾಗಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮಾಜಿ ಇಂಧನ ಕಾರ್ಯದರ್ಶಿ ಕೆ ಮೋಹನಚಂದ್ರನ್ ಮತ್ತು ಜಂಟಿ ಕಾರ್ಯದರ್ಶಿ ಎ ಫ್ರಾನ್ಸಿಸ್ ಅವರನ್ನು ಹೈಕೋರ್ಟ್ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಏಪ್ರಿಲ್ 6 ರಂದು ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಈ ಪ್ರಕರಣವು ತುರ್ತು ಮಹತ್ವದ್ದಾಗಿದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಬೊಟ್ಟುಮಾಡಿತ್ತು.
ಕೇರಳದಲ್ಲಿ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ. ಕುಂಞÁ ಲಿಕುಟ್ಟಿ ಅವರ ರಾಜೀನಾಮೆಯಿಂದ ತೆರವಾಗಿರುವ ಮಲಪ್ಪುರಂ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಕೂಡ ಅದೇ ದಿನ ನಡೆಯಲಿದೆ. ಕೇರಳದ ಹೊರತಾಗಿ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಕೇಂದ್ರ ಆಡಳಿತ ಪ್ರದೇಶ ಪುದುಚೇರಿಯ ಮತದಾನ ದಿನಾಂಕಗಳನ್ನು ಪ್ರಕಟಿಸಲಾಗಿದೆ.


