ಕಾಸರಗೋಡು: ವೇತನ ಆಯೋಗದಲ್ಲಿನ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಯುಕ್ತ ಮುಷ್ಕರ ಸಮಿತಿ ವತಿಯಿಂದ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಯಿತು. ಸಂಘಟನೆಯ ರಾಜ್ಯ ಸಮಿತಿ ಮಾಜಿ ಅಧ್ಯಕ್ಷ ಕೆ. ಎಂ. ಬಲ್ಲಾಳ್ ಉದ್ಘಾಟಿಸಿದರು. ದೈಹಿಕ ಶಿಕ್ಷಕರಿಗೆ ವೇತನ ಆಯೋಗದಲ್ಲಿ ಸೂಕ್ತ ಸವಲತ್ತು ನೀಡದೆ, ಈ ವಲಯವನ್ನು ನಿರ್ಲಕ್ಷಿಸಿರುವುದಾಘಿ ಆರೋಪಿಸಿ ಧರಣಿ ಆಯೋಜಿಸಲಾಗಿತ್ತು.
ಸಂಘಟನೆ ಪದಾಧಿಕಾರಿಗಳಾದ ವಿಜಯಕೃಷ್ಣ, ಸೂರ್ಯನಾರಾಯಣ ಭಟ್ ಎಡನೀರು, ಶಶಿಕಾಂತ್, ಶ್ಯಾಂ ಪ್ರಸಾದ್, ಮಧುಸೂಧನನ್, ಅನಿತಾ ಮುಂತಾದವರು ಪಾಲ್ಗೊಂಡಿದ್ದರು.





