ಕಾಸರಗೋಡು: ಸಾಮಾಜಿಕ ನೀತಿ ಇಲಾಖೆ ಪೆÇ್ರಬೇಷನ್ ಕಚೇರಿ ವತಿಯಿಂದ ಪೆÇ್ರಬೇಷನ್ ಆ್ಯಂಡ್ ಕೇರ್ ಯೋಜನೆ ಅಂಗವಾಗಿ ಅಪರಾಧ ಪ್ರಕರಣಗಳಿಗೆ ತುತ್ತಾಗಿ ಮೃತಪಟ್ಟವರ ಆಶ್ರಿತರ ಮತ್ತು ಅಪರಾಧ ಪ್ರಕರಣಗಳಿಂದ ಗಂಭೀರ ಗಾಯಗೊಂಡವರ ಪುನರ್ವಸತಿಗೆ ಸಂಬಂಧಿಸಿ ಸ್ವ ಉದ್ಯೋಗ ಆರ್ಥಿಕ ಸಹಾಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅಪರಾಧ ಪ್ರಕರಣಗಳು ನಡೆದು 5 ವರ್ಷ ಕಾಲಾವಧಿಯೊಳಗೆ ಅರ್ಜಿ ಸಲ್ಲಿಸಬೇಕು. ಈ ಪ್ರಕರಣಗಳಲ್ಲಿ ಗಂಭೀರ ಗಾಯಗೊಂಡವರು ಅಥವಾ ಮೃತಪಟ್ಟವರ ಆಶ್ರಿತರಾದ ಪತ್ನಿ/ಪತಿ, ಅವಿವಾಹಿತರಾಗಿರುವ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಫಾರಂ ಕಾಸರಗೋಡು ಸಿವಿಲ್ ಸ್ಟೇಷನ್ ನ ಜಿಲ್ಲಾ ಪೆÇ್ರಬೇಷನ್ ಕಚೇರಿಯಲ್ಲಿ ಲಭ್ಯವಿದೆ. ಫೆ.15ರಂದು ಸಂಜೆ 4 ಗಂಟೆಗೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ದೂರವಾಣಿ ಸಂಖ್ಯೆ: 04994-255366, 9747019509.




