HEALTH TIPS

ದೇಶದಲ್ಲೇ ಮೊದಲು: ಐಟಿ ಕ್ಷೇತ್ರಕ್ಕೆ ಕಲ್ಯಾಣ ನಿಧಿ ಸ್ಥಾಪಿಸಿದ ಕೇರಳ ಸರ್ಕಾರ

           ಕೊಚ್ಚಿ: ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕೇರಳದಲ್ಲಿ ಐಟಿ ಕ್ಷೇತ್ರದ ಉದ್ಯೋಗಿಗಳಿಗಾಗಿ ಕಲ್ಯಾಣ ನಿಧಿ ಸ್ಥಾಪಿಸಲಾಗಿದೆ. 18 ರಿಂದ 55 ವರ್ಷದೊಳಗಿನ ಉದ್ಯೋಗಿಗಳು ಈ ಯೋಜನೆಯಲ್ಲಿ ಪ್ರಯೋಜನ ಪಡೆಯಬಹುದಾಗಿದೆ.


         ಸುಮಾರು 10 ವರ್ಷಗಳ ಕಾಲ ಕಲ್ಯಾಣ ನಿಧಿಯಿಂದ ನೌಕರರಿಗೆ ಪಿಂಚಣಿಯಾಗಿ 3,000 ರೂ. ನೀಡಲಾಗಿದೆ. ಐಟಿ ಉದ್ಯೋಗಿಗಳ ಎರಡು ಕಲ್ಯಾಣ ಸಂಸ್ಥೆಗಳಾದ ಪ್ರತಿಧ್ವನಿ ಮತ್ತು ಪ್ರೋಗ್ರೆಸ್ಸಿವ್ ಟೆಕೀಸ್ ಕಲ್ಯಾಣ ನಿಧಿಯನ್ನು ಸ್ಥಾಪಿಸುವಂತೆ ಒತ್ತಾಯಿಸುತ್ತಿದ್ದವು. ಸಂಘಟನೆಯ ಅಧಿಕಾರಿಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

           ಐಟಿ ಉದ್ಯೋಗಿಗಳಿಗೆ ಕಲ್ಯಾಣ ನಿಧಿಯನ್ನು ಜಾರಿಗೆ ತಂದಿರುವುದು ಭಾರತದಲ್ಲಿ ಇದೇ ಮೊದಲು. ಕೇರಳ ಇತರ ರಾಜ್ಯಗಳಿಗೆ ಒಂದು ಮಾದರಿಯಾಗಿದೆ ಎಂದು ಪ್ರತಿಧ್ವನಿ ಸಂಸ್ಥೆಯ ಕಾರ್ಯದರ್ಶಿ ವಿನೀತ್ ಚಂದ್ರನ್ ಹೇಳಿದ್ದಾರೆ.

ಐಟಿ ಉದ್ಯೋಗಿಗಳಿಗೆ ಕಲ್ಯಾಣ ಮಂಡಳಿ ಸ್ಥಾಪಿಸುವ ಬಗ್ಗೆ ಪ್ರತಿಧ್ವನಿ ಅಧಿಕಾರಿಗಳು 2017 ಮತ್ತು 2018 ರಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮನವಿ ಮಾಡಿದ್ದರು. ಜರ್ಮನಿ, ಡೆನ್ಮಾರ್ಕ್, ಮತ್ತು ಯುಕೆ ಮುಂತಾದ ದೇಶಗಳಲ್ಲಿ ಐಟಿ ಉದ್ಯೋಗಿಗಳಿಗೆ ವಿಮಾ ಯೋಜನೆಗಳಿವೆ. ಕಲ್ಯಾಣ ನಿಧಿಯು ಐಟಿ ಕ್ಷೇತ್ರದಲ್ಲಿ ಇರುವವರಿಗೆ ಪಿಂಚಣಿ, ಅವರ
ಮಕ್ಕಳಿಗೆ ಶಿಕ್ಷಣ ಸೌಲಭ್ಯಗಳು, ಹೆರಿಗೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿದೆ' ಎಂದು ಅವರು ಹೇಳಿದ್ದಾರೆ.

ಪ್ರಸ್ತುತ, ಕೇರಳ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನಾ ಕಾಯ್ದೆಯಡಿ ಕಲ್ಯಾಣ ನಿಧಿಗೆ 20 ರೂಪಾಯಿಗಳನ್ನು ಕಡಿತಗೊಳಿಸಲಾಗುತ್ತಿದೆ. ಇದನ್ನು 100 ರೂ.ಗೆ ಹೆಚ್ಚಿಸಲಾಗುವುದು. 10 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಸಹ ಯೋಜನೆಯ ಲಾಭ ಪಡೆಯುತ್ತವೆ.

          ನಿಧಿಯ ಹೆಚ್ಚಳವು ಹೆಚ್ಚಿನ ಪ್ರಯೋಜನಗಳನ್ನು ಖಚಿತಪಡಿಸುತ್ತದೆ' ಎಂದು ವಿನೀತ್ ಹೇಳಿದರು. ಪ್ರೋಗ್ರೆಸ್ಸಿವ್ ಟೆಕೀಸ್ (ಪಿಟಿ) ಸದಸ್ಯರು ಮುಖ್ಯಮಂತ್ರಿಯವರೊಂದಿಗಿನ ಚರ್ಚಾ ಕಾರ್ಯಕ್ರಮದಲ್ಲಿ ಕಲ್ಯಾಣ ನಿಧಿಯ ಅಗತ್ಯವನ್ನು ಪ್ರಸ್ತಾಪಿಸಿದ್ದರು. ಅವರು ಅದನ್ನು ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದ್ದರು. ಹೀಗಿದ್ದರೂ ನಾವು ತಕ್ಷಣ ಜಾರಿಗೆ ತರುತ್ತಾರೆ ಎಂದೂ ನಿರೀಕ್ಷಿಸಲಿಲ್ಲ ಎಂದು ಪ್ರೊಗ್ರೇಸ್ಸಿವ್ ಟೆಕ್ಕಿಸ್ ನ ಅಧ್ಯಕ್ಷ ಅನೀಶ್ ಪಂತಳಾನಿ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries