ಕಾಸರಗೋಡು: ಸಾರ್ವಜನಿಕ ಸಂಪರ್ಕ ಇಲಾಖೆ ಕಾಸರಗೋಡು ಜಿಲ್ಲಾ ಕಚೇರಿ ಕಟ್ಟಡದ ಉದ್ಘಾಟನೆ ಅಂಗವಾಗಿ ಇಂದು(ಪೆ.18) ಮಧ್ಯಾಹ್ನ 2.30ಕ್ಕೆ "ಕಾಸರಗೋಡು ಜಿಲ್ಲೆಯ ಶಾಶ್ವತ ಅಭಿವೃದ್ಧಿ" ಎಂಬ ವಿಷಯದಲ್ಲಿ ವಿಚಾರಸಂಕಿರಣ ಜರುಗಲಿದೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯುವ ವಿಚಾರಸಂಕಿರಣವನ್ನು ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ಉಪನ್ಯಾಸ ನಡೆಸುವರು. ಕುಟುಂಬಶ್ರೀ ಚಟುವಟಿಕೆಗಳ ಕುರಿತು ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್, ಆರೋಗ್ಯ ವಲಯದ ಚಟುವಟಿಕೆಗಳ ಕುರಿತು ಜನರಲ್ ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಎಸ್.ರಾಜಾರಾಮ, ಜನಪರ ಯೋಜನೆ ಮತ್ತು ಜಿಲ್ಲೆ ಎಂಬ ವಿಷಯದಲ್ಲಿ ಜಿಲ್ಲಾ ಯೋಜನಾಧಿಕಾರಿ ಎ.ಎಸ್.ಮಾಯಾ, ಶಿಕ್ಷಣ ರಂಗದ ಚಟುವಟಿಕೆಗಳ ಕುರಿತು ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಜಿಲ್ಲಾ ಸಂಚಾಲಕ ಪಿ.ದಿಲೀಪ್ ಕುಮಾರ್ ಮಾತನಾಡುವರು. ಐ.ಪಿ.ಆರ್.ಡಿ. ಸಹಾಯಕ ನಿರ್ದೇಶಕ ಕೆ.ಅಬ್ದುಲ್ ರಷೀದ್ ಅಧ್ಯಕ್ಷತೆ ವಹಿಸುವರು. ವಲಯ ಸಹಾಯಕ ನಿರ್ದೇಶಕ ಇ.ವಿ.ಸುಗತನ್ ಸಮನ್ವಯಕಾರರಾಗಿರುವರು.




