ಪೆರ್ಲ: ಸ್ವಾಸ್ಥ್ಯ ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಪ್ರಧಾನ ಪಾತ್ರವಹಿಸುವ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರವು ಎಣ್ಮಕಜೆ ಗ್ರಾಮ ಪಂಚಾಯತಿನ ಮುಖ್ಯ ಪೇಟೆಯಾದ ಪೆರ್ಲದಲ್ಲಿ ಸೋಮವಾರ ಶುಭಾರಂಭಗೊಂಡಿದೆ.
ಇಲ್ಲಿನ ಮುಖ್ಯ ರಸ್ತೆಯ ಕೆ.ಬಿ.ಎಚ್ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡ ಜನ ಔಷಧಿ ಕೇಂದ್ರವನ್ನು ನಿವೃತ್ತ ಶಿಕ್ಷಕ,ಜ್ಯೋತಿಷ್ಯರಾದ ಗೋವಿಂದ ಭಟ್ ಪುದುಕೋಳಿ ದೀಪ ಪ್ರಜ್ವಲನೆಗೈದು ಪ್ರಾರ್ಥನೆಗೈದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ವಾರ್ಡ್ ಸದಸ್ಯೆ ಉಷಾ ಗಣೇಶ್, ಕಾಟಕುಕ್ಕೆ ಶ್ರೀಸುಬ್ರಾಯ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ, ವ್ಯಾಪಾರಿ ಏಕೋಪನ ಸಮಿತಿ ಪೆರ್ಲ ಘಟಕದ ಅಧ್ಯಕ್ಷ ಕೃಷ್ಣ ಪೈ, ಪೆರ್ಲ ಅಗ್ರಿಕಲ್ಚರ್ ಕೋಆಪರೇಟಿವ್ ಬ್ಯಾಂಕ್ ಕಾರ್ಯದರ್ಶಿ ರಾಮಕೃಷ್ಣ ರೈ ಕುದ್ವ,ಕೆಬಿಎಚ್ ಕಾಂಪ್ಲೆಕ್ಸ್ ಮಾಲಕ ಶಾಹುಲ್ ಹಮೀದ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.ಬದಿಯಡ್ಕ ಜನ ಔಷಧಿ ಕೇಂದ್ರದ ಕುಮಾರ ಸುಬ್ರಹಣ್ಯ ಪೈಸಾರಿ ಜನ ಔಷಧಿ ಕೇಂದ್ರದ ಪ್ರಯೋಜನಗಳ ಬಗ್ಗೆ ಪ್ರಸ್ತಾವನೆಗೈದರು. ಜನ ಔಷಧಿ ಕೇಂದ್ರದ ಮಾಲೀಕರಾದ ಡಾ.ಎಸ್.ಎನ್.ಭಟ್ ಸ್ವಾಗತಿಸಿ ಪತ್ರಕರ್ತ ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ಸುಕುಮಾರ ಮಾಸ್ತರ್ ವಂದಿಸಿದರು.
ಕಳೆದ 32 ವರ್ಷಗಳಿಂದ ಪೆರ್ಲದಲ್ಲಿ ಕಾರ್ಯಚರಿಸುತ್ತಿದ್ದ ಜ್ಯೋತಿ ಮೆಡಿಕಲ್ಸ್ ನ ಸಮೂಹ ಸಂಸ್ಥೆ ಇದಾಗಿದೆ. ಅತ್ಯುತ್ತಮ ಗುಣ ಮಟ್ಟದ ಜನರಿಕ್ ಮೆಡಿಸಿನ್ ಗಳು ಇಲ್ಲಿ ರಿಯಾಯತಿ ದರದಲ್ಲಿ ಲಭ್ಯವಾಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.






