ಕಾಸರಗೋಡು: ಅಣಂಗೂರು ಜೆ.ಪಿ.ನಗರದಲ್ಲಿ ಶ್ರೀ ಕೊರಗಜ್ಜ ಹಾಗು ಶ್ರೀ ಚೌಕಾರು ಗುಳಿಗ ಸನ್ನಿ„ಯಲ್ಲಿ ಪ್ರತಿಷ್ಠಾ ಮಹೋತ್ಸವ ಬುಧವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಬೆಳಗ್ಗೆ ಗಣಪತಿ ಹೋಮ, ಪ್ರತಿಷ್ಠಾ ಹೋಮ, ಕಲಶ ಪೂಜೆಯ ಬಳಿಕ ಶ್ರೀ ಕೊರಗಜ್ಜ ದೈವ ಹಾಗು ಶ್ರೀ ಚೌಕಾರು ಗುಳಿಗ ದೈವಗಳ ಪ್ರತಿಷ್ಠೆ ಕಲಶಾಭಿಷೇಕ ಪರ್ವ ಸೇವೆ ನಡೆಯಿತು. ಆ ಬಳಿಕ ಪ್ರಸನ್ನ ಪೂಜೆ ಪ್ರಸಾದ ವಿತರಣೆ, ಶ್ರೀ ಚೌಕಾರು ಗುಳಿಗ ದೈವದ ಕೋಲ, ಶ್ರೀ ಕೊರಗಜ್ಜ ದೈವದ ಕೋಲ, ಪ್ರಸಾದ ವಿತರಣೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಫೆ.16 ರಂದು ಅಣಂಗೂರು ಶ್ರೀ ಧೂಮಾವತಿ ದೈವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಜರಗಿತು. ಆ ಬಳಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯ ವಾಚನ, ಅಘೋರ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಬಿಂಬ ಶುದ್ಧಿ, ಬಿಂಬ ವಾಸ್ತು, ಬಿಂಬಾದಿವಾಸ ಜರಗಿತು.





