ಕಾಸರಗೋಡು: ಮಲೆನಾಡ ಜನತೆಯ ಅನೇಕ ವರ್ಷಗಳ ಕನಸಾಗಿದ್ದ ಮಿನಿ ಸಿವಿಲ್ ಸ್ಟೇಷನ್ ಕಟ್ಟಡ ವೆಳ್ಳರಿಕುಂಡ್ ನಲ್ಲಿ ಶನಿವಾರ ಉದ್ಘಾಟನೆಗೊಂಡಿದೆ.
ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಸಚಿವ ಉತ್ತರ, ದಕ್ಷಿಣ ವ್ಯತ್ಯಾಸಗಳಿಲ್ಲದೆ 60 ಸಾವಿರ ಕೋಟಿ ರೂ.ನ ಅಭಿವೃದ್ಧಿ ಚಟುವಟಿಕೆಗಳನ್ನು ಈ 5 ವರ್ಷಗಳ ಅವಧಿಯಲ್ಲಿ ಕಿಫ್ ಬಿ ಮುಖಾಂತರ ರಾಜ್ಯ ಸರಕಾರ ನಡೆಸಿದೆ. ಈ ಮೂಲಕ ಮೂಲಭೂತ ಸೌಲಭ್ಯಗಳ ವಲಯದಲ್ಲಿ ಕ್ರಾಂತಿ ನಡೆಸಲಾಗಿದೆ ಎಂದು ತಿಳಿಸಿದರು.
ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ಪರಪ್ಪ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಎಂ.ಲಕ್ಷ್ಮಿ, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜು ಕಟ್ಟಕಯಂ, ಜೇಂಸ್ ಪಂದಮಾಕ್ಕಲ್, ಗಿರಿಜಾ ಮೋಹನ್, ಪಿ.ಶ್ರೀಜಾ, ಪ್ರಸನ್ನಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.






