ಕಾಸರಗೋಡು: ಭವಿಷ್ಯದಲ್ಲಿ ಕೇರಳದ ವಿವಿಧ ವಲಯಗಳ ಯುವಜನತೆಯ ಅಭಿಪ್ರಾಯ ಕ್ರೋಡೀಕರಣ, ಸಂಗ್ರಹಗೊಂಡ ಅಭಿಮತಗಳನ್ನು ಸರಕಾರಕ್ಕೆ ಸಲ್ಲಿಸುವ ಉದ್ದೇಶದಿಂದ ರಾಜ್ಯ ಯುವಜನ ಕಲ್ಯಾಣ ಮಂಡಳಿ "ಸ್ಪೀಕಿಂಗ್ ಯಂಗ್" ಎಂಬ ವಿನೂತನ ಕಾರ್ಯಕ್ರಮ ನಡೆಸಲಾಯಿತು. ರಾಜ್ಯದ 140 ವಿಧಾನಸಭೆ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ನಡೆಯಿತು. ವಿವಿಧ ವಲಯಗಳಲ್ಲಿ ಸಾಧನೆ ನಡೆಸಿರುವ 20 ಮಂದಿ ಯುವಕ-ಯುವತಿಯರು ನೇರವಾಗಿ ಮತ್ತು ಉಳಿದವರು ಲಿಖಿತರೂಪದಲ್ಲಿ ತಮ್ಮ ಅಭಿಮತ ನೀಡಿದರು. ಇವನ್ನು ಕ್ರೋಡೀಕರಿಸಿ ಮುಖ್ಯಮಂತ್ರಿಗೆ ಹಸ್ತಾಂತರಿಸಲಾಗುವುದು.
ಮಂಜೇಶ್ವರ ವಿಧಾನಸಭೆಯಲ್ಲಿ ಕುಂಬಳೆ ಸರಕಾರಿ ಎಸ್.ಬಿ.ಎಸ್. ಶಾಲಾ ಮೈದಾನ, ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಕಾಸರಗೋಡು ಸರಕಾರಗೋಡು ಸರಕಾರಿ ಕಾಲೇಜಿನ ಮುಕ್ತ ಸಭಾಂಗಣ, ಕಾಞಂಗಾಡ್ ನಲ್ಲಿ ಪಡನ್ನ ಕ್ಕಾಡ್ ಬೇಕಲ ಕ್ಲಬ್, ತ್ರಿಕರಿಪುರದಲ್ಲಿ ಚೆರುವತ್ತೂರು ಇ.ಎಂ.ಎಸ್. ಮುಕ್ತ ಸಭಾಂಗಣಗಳಲ್ಲಿ ಈ ಕಾರ್ಯಕ್ರಮ ಜರುಗಿತು.




