ಮಂಜೇಶ್ವರ: ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಮತ್ತು ಮೀಸಲಾತಿಯ ಲಾಭಗಳನ್ನು ಪಡೆಯಲು ಶಿಕ್ಷಣ ಮಟ್ಟದಲ್ಲಿ ಸಮಗ್ರ ಪ್ರಯತ್ನಗಳು ಅಗತ್ಯ ಎಂದು ಎಸ್.ಕೆ.ಎಸ್.ಎಸ್.ಎಫ್. ರಾಜ್ಯ ಕಾರ್ಯದರ್ಶಿ ಸದಸ್ಯ ಮೊಹಮ್ಮದ್ ಫೈಜಿ ಖಾಜಿ ಹೇಳಿದರು.
ಮಂಜೇಶ್ವರದಲ್ಲಿ ಶುಕ್ರವಾರ ಕಾಸರಗೋಡು ಜಿಲ್ಲಾ ಸಮಸ್ತ ನೌಕರರ ಸಂಘ ಆಯೋಜಿಸಿದ್ದ ಸಂದೇಶ ರ್ಯಾಲಿಗೆ ನೀಡಿದ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್.ಇ.ಎ ಮಂಜೇಶ್ವರ ಅಧ್ಯಕ್ಷ ಬಶೀರ್ ಮಾಸ್ತರ್ ಕಳಿಯೂರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಾಥಾ ನಾಯಕ ಮುಹಮ್ಮದ್ ಕುಟ್ಟಿ ಮಾಸ್ತರ್, ಉಪನಾಯಕ ಸಿರಾಜುದ್ದೀನ್ ಖಾಸಿ ಲೈನ್, ನಿರ್ದೇಶಕ ಇರ್ಷಾದ್ ಹುದವಿ ಬೆದಿರ, ಸಂಯೋಜಕ ಇ.ಕೆ. ಸಮೀರ್ ಮಾಸ್ತರ್ ತೆಕ್ಕಿಲ್, ಗಫೂರ್ ಮಾಸ್ತರ್, ನಿಜಾಮ್ ಬೋವಿಕ್ಕಾನ, ಅಬ್ದುಲ್ಲ ಚಾಲ, ಅಲಿ ಮಾಸ್ತರ್, ಎನ್.ಎಂ. ಸಿದ್ದೀಕ್ ಬೆದಿರ, ಕಾಸಿಮ್ ಚಾಲ, ಅಶ್ರಫ್, ಅಬ್ದುರ್ ರಹಮಾನ್ ಹಾಜಿ ಕಡಂಬಾರ್, ಎ.ಪಿ. ಅಬ್ದುಲ್ಲ ಅಸ್ಹರಿ, ಇಬ್ರಾಹಿಂ ಕಡಮಬಾರ್, ಸತ್ತಾರ್ ಆವಳ, ಸಿರಾಜ್ ಮಾಸ್ತರ್, ಮೊದಲಾದವರು ಮಾತನಾಡಿ ಶುಭಹಾರೈಸಿದರು. ರಿಯಾಜ್ ವಾಫಿ ಸ್ವಾಗತಿಸಿ, ವಂದಿಸಿದರು. ಶನಿವಾರ ಬೆಳಿಗ್ಗೆ ತೃಕ್ಕರಿಪುರದಿಂದ ಆರಂಭಗೊಂಡ ಸಂದೇಶ ರ್ಯಾಲಿ ಕಾಞಂಗಾಡ್, ಮೇಲ್ಪರಂಬಗಳಲ್ಲಿ ನೀಡಲಾದ ಸ್ವಾಗತದ ಬಳಿಕ ಸಂಜೆ ಕಾಸರಗೋಡು ಕೊಲ್ಲಂಬಾಡಿಯಲ್ಲಿ ಸಮಾರೋಪಗೊಂಡಿತು.





