ಕಾಸರಗೋಡು: ಮಾವಿಲ ಕಡಪ್ಪುರಂ ಬೋಟ್ ಜಟ್ಟಿಯ ಉದ್ಘಾಟನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್ ಲೈನ್ ಮೂಲಕ ನೆರವೇರಿಸಿದರು. ಮುಜರಾಯಿ ಖಾತೆ ಸಚಿವ ಕಡಗಂಪಳ್ಳಿ ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಘಿದ್ದರು. ಪ್ರವಾಸೋದ್ಯಮ ಖಾತೆ ಪ್ರಿನ್ಸಿಪಲ್ ಕಾರ್ಯದರ್ಶಿ ರಾಣಿಜಾರ್ಜ್ ಮುಖ್ಯ ಭಾಷಣ ಮಾಡಿದರು. ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಾಲಕೃಷ್ಣನ್ ವರದಿ ವಾಚಿಸಿದರು.
ಉತ್ತರ ಕೇರಳದ ಗ್ರಾಮೀಣ ಜೀವನವನ್ನು ಸಮೀಪದಿಂದ ವೀಕ್ಷಿಸುವ ನಿಟ್ಟಿನಲ್ಲಿ ಕಾಸರಗೋಡು-ಕಣ್ಣೂರು ಜಿಲ್ಲೆಗಳ ನದಿ, ಹಿನ್ನೀರು ಗಳಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರಸ್ತುತಪಡಿಸುವ ಪ್ರವಾಸ-ವಿಜ್ಞಾನ ಯೋಜನೆ ಮಲೆನಾಡು ಮಲಬಾರ್ ರಿವರ್ ಕ್ರೂಯಿಸ್ ಟೂರಿಸಂ ಯೋಜನೆ ಅಂಗವಾಗಿ ಜಟ್ಟಿ ನಿರ್ಮಿಸಲಾಗಿದೆ.
ಕಣ್ಣೂರು ಜಿಲ್ಲೆಯ ಪರಶ್ಯಿನಿಕಡವಿನಿಂದ ಕಾಸರಗೋಡು ಜಿಲ್ಲೆಯ ಕೋಟ್ಟಪ್ಪುರಂ ವರೆಗೆ ಸುಗಮ ಜಲಯಾತ್ರೆಗಿರುವ ಮೂಲ ಸೌಲಭ್ಯಗಳನ್ನು ಒದಗಿಸುವ ಚಟುವಟಿಕೆಗಳಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಪ್ರಥಮ ಯೋಜನೆ ಇದಾಗಿದೆ. ಒಟ್ಟು 2 .92 ಕೋಟಿ ರೂ. ವೆಚ್ಚದಲ್ಲಿ ವಲಿಯಪರಂಬ ಗ್ರಾಮ ಪಂಚಾಯಿತಿಯಲ್ಲಿ ಇದರ ನಿರ್ಮಾಣ ನಡೆದಿದೆ. ಹಿನ್ನೀರು ಮತ್ತು ಸಮುದ್ರ ಮಧ್ಯೆ ಇರುವ ಗ್ರಾಮ ಪಂಚಾಯಿತಿಗಳ ಪ್ರವಾಸೋದ್ಯಮ ಅಭಿವೃದ್ಧಿ ಜೆಟ್ಟಿ ನಿರ್ಮಾಣ ಪೂರಕವಾಗಲಿದೆ. ಇದೇ ಪಂಚಾಯಿತಿಯ ಮಾಡಕ್ಕಾಲ್ ಪ್ರದೇಶದಲ್ಲೂ ಬೋಟ್ ಜಟ್ಟಿ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ.
ನೀಲೇಶ್ವರ ನಗರಸಭೆಯ ಕೋಟ್ಟಪ್ಪುರಂ ನಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಹೌಸ್ ಬೋಟ್ ಟರ್ಮಿನಲ್ ಜಾರಿಗೊಳ್ಳುವ ಮೂಲಕ ತೇಜಸ್ವಿನಿ ನದಿಯಿಂದ ವಲಿಯಪರಂಬ ಹಿನ್ನೀರಿನ ವರೆಗೆ ವಿಸ್ತರಿಸುವ ಮಲಬಾರ್ ಹಿನ್ನೀರು ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಹೊಸ ಹಾದಿ ತೆರೆದುಕೊಳ್ಳಲಿದೆ.





