ಕಾಸರಗೋಡು: ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಐಸಿಎಆರ್-ಸಿಪಿಸಿಆರ್‍ಐ)ಅಭಿವೃದ್ಧಿಪಡಿಸಿರುವ ತೆಂಗಿನ ಕೊಬ್ಬರಿ ಹೋಳು ಮಾಡುವ ಯಂತ್ರಕ್ಕೆ ಭಾರತ ಸರ್ಕಾರದ ಪೇಟೆಂಟ್ ಲಭಿಸಿದೆ. ತೆಂಗಿನ ಕೊಬ್ಬರಿಯನ್ನು ತೆಳುವಾದ ಹೋಳುಗಳನ್ನಾಗಿಸಲು ಕಾಲುಗಳಿಂದ ನಡೆಸಬಹುದಾದ ಈ ಯಂತ್ರವನ್ನು ಸಿಪಿಸಿಆರ್‍ಐ ವಿಜ್ಞಾನಿಗಳು ತಯಾರಿಸಿದ್ದಾರೆ. ಅತ್ಯಂತ ತೆಳುವಾದ ಹಾಗೂ ಸಮಾನ ರೀತಿಯ ಹೋಳುಗಳನ್ನಾಗಿಸಲು ಈ ಯಂತ್ರದಿಂದ ಸಾಧ್ಯವಾಗಲಿದೆ. ಯಂತ್ರವನ್ನು ದೈಹಿಕವಾಗಿ ನಡೆಸಲು ಸಾಧ್ಯವಾಗುವ ರೀತಿಯಲ್ಲಿ ಆವಿಷ್ಕರಿಸಿರುವುದರಿಂದ ಸಣ್ಣ ಉದ್ದಿಮೆದಾರರಿಗೆ ಈ ಯಂತ್ರ ವರದಾನವಾಗಲಿದೆ.
ಸುಲಭವಾಗಿ ಸಾಗಾಟ ನಡೆಸಬಹುದಾದ ಈ ಯಂತ್ರವನ್ನು ಕೋಕನಟ್ ಚಿಪ್ಸ್ ತಯಾರಿಕಾ ಸಂಸ್ಥೆಗಳು ದೇಶಾದ್ಯಂತ ಬಳಸಿಕೊಳ್ಳಲು ಮುಂದಾಗಿದೆ. ಕಾಸರಗೋಡು ಸಿಪಿಸಿಆರ್‍ಐಗೆ ಈಗಾಗಲೇ ಒಂಬತ್ತು ರಾಷ್ಟ್ರೀಯ ಪೇಟೆಂಟ್ ಲಭ್ಯವಾಗಿದೆ. ಇವುಗಳಲ್ಲಿ ಏಳು ತೆಂಗಿನ ಉತ್ಪನ್ನಗಳಿಗೆ ಸಂಬಂಧಿಸಿದ ಯಂತ್ರೋಪಕರಣಗಳಿಗೆ ಈ ಪೇಟೆಂಟ್ ಲಭ್ಯವಾಗಿದೆ.




