ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮೇ ತಿಂಗಳ 21 ರಿಂದ 29 ರ ವರೆಗೆ ನಡೆಯಲಿರುವುದು. ಇದರ ಪೂರ್ವಭಾವಿಯಾಗಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಉಪಸ್ಥಿತಿಯಲ್ಲಿ ಇತ್ತೀಚೆಗೆ ನಡೆದ ತಾಂಬೂಲ ಪ್ರಶ್ನೆ ಚಿಂತನೆಯಂತೆ ದೋಷ ನಿವಾರಣೆಗಾಗಿ ಸೋಮವಾರ ವಿವಿಧ ಧಾರ್ಮಿಕ-ವೈದಿಕ ವಿಧಿವಿಧಾನಗಳು ತಂತ್ರಿವರ್ಯರ ನೇತೃತ್ವದಲ್ಲಿನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಪತಿ ಹವನ, ತ್ರಿಕಾಲ ಪೂಜೆ ಆರಂಭ, ಮೃತ್ಯುಂಜಯ ಹವನ, ಬಲಿವಾಡು ಕೂಟ, ಸಾಮೂಹಿಕ ಪ್ರಾರ್ಥನೆ ನೆರವೇರಿತು. ಸಂಜೆ ವನದುರ್ಗಾ ಹವನ, ತ್ರಿಕಾಲಪೂಜಾ ಮಂಗಳಾರತಿ ಮೊದಲಾದ ಕಾರ್ಯಕ್ರಮಗಳು ನಡೆಯಿತು.








