ಕಾಸರಗೋಡು: ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕøತಿಯ ಅಸ್ಮಿತೆಯನ್ನು ಕಾಪಿಡುವಲ್ಲಿ ಸಂಸ್ಕøತಿ ಉತ್ಸವಗಳಂತಹ ಚಟುವಟಿಕೆಗಳು ಬೆಂಬಲ ನೀಡಿ ಪರಿಪೋಶಿಸುತ್ತದೆ. ಯುವ ಪ್ರತಿಭಾನ್ವಿತರಿಗೆ ವೇದಿಕೆಯಾಗಿ ಸಂಸ್ಕøತಿ ಸಂವರ್ಧನೆಯಲ್ಲಿ ಮನೆ-ಮನಗಳಿಗೆ ಪ್ರೇರಣೆಯಾಗುವ ಚಟುವಟಿಕೆಗಳು ಇನ್ನಷ್ಟು ವಿಸ್ತರಣೆಗೊಳ್ಳಬೇಕು ಎಂದು ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ, ಮಂಜೇಶ್ವರದ ಕಲಾಸ್ಪರ್ಶಂ ಸಾಂಸ್ಕøತಿಕ ಕೇಂದ್ರದ ನಿರ್ದೇಶಕಿ ಜೀನ್ ಲವಿನೊ ಮೊಂತೇರೊ ತಿಳಿಸಿದರು.
ಕಾಸರಗೋಡಿನ ರಂಗಕುಟೀರದ ಆಶ್ರಯದಲ್ಲಿ ಭಾನುವಾರ ಅಪರಾಹ್ನ ಕಾಸರಗೋಡು ಮುನ್ಸಿಪಲ್ ಕಾನ್ಪರೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ಸಂಸ್ಕøತಿ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ, ಸಂಸ್ಕøತಿಯ ಬೆಳವಣಿಗೆಗೆ ಸಾಹಿತ್ತಿಕ-ಸಾಂಸ್ಕøತಿಕ ಚಟುವಟಿಕೆಗಳು ಪೂರಕ ಶಕ್ತಿ ನೀಡುತ್ತದೆ. ಹಲವಾರು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಚಟುವಟಿಕೆಗಳಿಂದ ರಂಗಕುಟೀರ ನಾಡು-ನುಡಿಗೆ ಸಲ್ಲಿಸುತ್ತಿರುವ ಸೇವೆ ಸ್ತುತ್ಯರ್ಹವಾದುದು ಎಂದು ಅವರು ಈ ಸಂದರ್ಭ ತಿಳಿಸಿದರು.
ರಂಗ ಕಲಾವಿದೆ ಭಾರತಿ ಬಾಬು ಕಾಸರಗೋಡು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ನೃತ್ಯ ಶಿಕ್ಷಕಿ ವಿದುಷಿಃ ಲತಾ ಶಶಿಧರ್, ಕಾಸರಗೋಡು ಮಹಾಗಣಪತಿ ಯಕ್ಷಗಾನ ಕಲಾಸಂಘದ ಸಂಚಾಲಕಿ ಪ್ರಸನ್ನಕುಮಾರಿ ಕಾಸರಗೋಡು ಉಪಸ್ಥಿತರಿದ್ದು ಶುಭಹಾರೈಸಿದರು.
ಬಳಿಕ ವಿದುಷಿಃ ಲತಾ ಶಶಿಧರ್ ಅವರ ಶಿಷ್ಯವೃಂದದವರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಹಾಗೂ ಪದ ಬೆಂಗಳೂರು ನಿರ್ದೇಶಕ ದೇವರಾಜ್ ಅವರ ತಂಡದವರಿಂದ ಸುಗಮ ಸಂಗೀತ, ನಾಡಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ರಂಗಕುಟೀರದ ನಿರ್ದೇಶಕ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ದೇವರಾಜ ಬೆಂಗಳೂರು ವಂದಿಸಿದರು.







