HEALTH TIPS

ಒಡಿಯೂರು ಶ್ರೀಗಳ ಷಷ್ಟ್ಯಬ್ಧಿ ಪ್ರಯುಕ್ತ ಮಂಜೇಶ್ವರ ವಲಯದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ- ಜನ ಸೇವೆಯೊಂದೇ ಭಗವಂತನಿಗೆ ಅತ್ಯಂತ ಪ್ರೀತ್ಯರ್ಥ-ಗುರುದೇವಾನಂದ ಶ್ರೀ

       

         ಮಂಜೇಶ್ವರ: ಮನುಷ್ಯನ ಬದುಕು ನಿಂತ ನೀರಾಗದೆ ಸದಾ ಹರಿಯುವ ನೀರಿನಂತಿರಬೇಕು. ಜ್ಞಾನದ ಕೀಲಿಕೈ ಅನುಭವವಾಗಿದೆ. ಸಮಸ್ಯೆಗಳ ಅನುಭವಗಳಿಂದ ಜ್ಞಾನದ ವೃದ್ಧಿಯನ್ನು ಸಾಧಿಸಬೇಕು. ಮನುಷ್ಯ ತನ್ನ ಹುಟ್ಟು ಮತ್ತು ಸಾವಿನ ಅರಿವಿನೊಂದಿಗೆ ಸನ್ಮಾರ್ಗದತ್ತ ಸಾಗುವ ಚಿಂತನೆಯನ್ನು ಮಾಡಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

     ಒಡಿಯೂರು ಶ್ರೀಗಳ ಷಷ್ಟ್ಯಬ್ದಿ  ಸಂಭ್ರಮ ಕಾರ್ಯಕ್ರಮದ ಪ್ರಯುಕ್ತ ಜ್ಞಾನವಾಹಿನಿ ಮಂಜೇಶ್ವರ ವಲಯದ ಸರಣಿ ಕಾರ್ಯಕ್ರಮಗಳಿಗೆ ಹೊಸಬೆಟ್ಟು ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಪರಿಸರದಲ್ಲಿ ಭಾನುವಾರ ಸಂಜೆ ನಡೆದ ಸಮಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು. 

       ಧರ್ಮವನ್ನು ವಿಕೃತಿಗೊಳಿಸಲು ಪ್ರಯತ್ನ ನಡೆದಾಗ ಮಸಿ ಬಳಿಯುವಂತಹ ಘಟನೆ ನಡೆಯಬೇಕು. ಧರ್ಮದ ಚೌಕಟ್ಟಿನೊಳಿಗೆ ಭಗವಂತನಿಗೆ ಮೆಚ್ಚುಗೆಯಾಗುವಂತಹ ಬಾಳ್ವೆ ನಡೆಸಬೇಕು. ಅದರಲ್ಲಿಯೂ ಜನರ ಸೇವೆ ದೇವರಿಗೆ ಅತ್ಯಂತ ಪ್ರೀತ್ಯರ್ಥವಾದದ್ದು. ಸಮಾಜದ ಕಡೆಯ ವ್ಯಕ್ತಿಗೂ ಸುಂದರ ಬದುಕು ನಡೆಸುವಂತಹ ಪ್ರಯತ್ನ ಮಾಡಬೇಕು ಎಂದು ಅವರು ನುಡಿದರು.

       ದಿವ್ಯ ಉಪಸ್ಥಿತರಿದ್ದ ಕೊಂಡೆವೂರು ಶ್ರೀ ಯೋಗಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದದಲ್ಲಿ ಸಾಧು ಸಂತರು ಲೈಟ್ ಹೌಸ್ ಗಳಂತೆ ಬೆಳಕು ನೀಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ನೀರಿನಾಳದಲ್ಲಿ ಮೀನುಗಳು ಸಂಚರಿಸಿದಂತೆ ಸಂತರು ಸಮಾಜದ ಮೂಲೆ ಮೂಲೆಗಳಿಲ್ಲಿಯೂ ಸಂಚರಿಸಿ ಅಂಕುಡೊಂಕುಗಳ ತಿದ್ದುವಿಕೆಗೆ ಕಾರಣರಾಗುತ್ತಾರೆ. ಮಾರ್ಗದರ್ಶನದ ಕೊರತೆಯಿಂದ ಜನತೆ ಅಧರ್ಮದ ಹಾದಿ ಹಿಡಿಯತ್ತಿದ್ದಾರೆ. ಒಡಿಯೂರು ಶ್ರೀಗಳ ಷಷ್ಟ್ಯಬ್ಧಿ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಜ್ಞಾನವನ್ನು ಅರಳಿಸಿ , ಧರ್ಮದ ಕಡೆಗೆ ಮರಳುವಂತಹ ಪ್ರಭಾವವನ್ನು ಬೀರಲಿ ಎಂದು ತಿಳಿಸಿದರು.  


    ಇದೇ ವೇಳೆ ಸಾಧ್ವಿ ಶ್ರೀ ಮಾತಾನಂದಮಯೀ ಅವರು ಹಾಡಿರುವ ಹನುಮಾನ್ ಚಾಲೀಸಾ ಧ್ವನಿ ಸುರುಳಿ ಹಾಗೂ ಪ್ರೊ.ವಿ.ಬಿ.ಅರ್ತಿಕಜೆ ಕನ್ನಡಕ್ಕೆ ಅನುವಾದಿಸಿರುವ ಹನುಮಾನ್ ಚಾಲೀಸಾ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಬಳಿಕ ಸಾಧ್ವಿ ಶ್ರೀ ಮಾತನಾಂದಮಯೀ ಅವರು ಹನುಮಾನ್ ಚಾಲೀಸಾದ ಮಾದರಿ  ಪಠನ ಮಾಡಿದರು.


       ಇದೇ ವೇಳೆ ಮಂಜೇಶ್ವರ ವಲಯದ ಸೇವಾ ಬಳಗವನ್ನು ತೆಂಗಿನ ತೆನೆ ಅರಳಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಒಡಿಯೂರು ಶ್ರೀಗಳ ಷಷ್ಟ್ಯಬ್ಧಿ ಸಂಭ್ರಮ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನವನೀತ್ ಶೆಟ್ಟಿ ಕದ್ರಿ, ಕೋಶಾಧಿಕಾರಿ ಎ .ಸುರೇಶ್ ರೈ, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು. ಬಳಿಕ ಷಷ್ಟ್ಯಬ್ಧಿಯ ಅಂಗವಾಗಿ ಮಂಜೇಶ್ವರ ವಲಯದ ಪೈವಳಿಕೆ, ಮೀಂಜ, ಮಂಜೇಶ್ವರ, ಮಂಗಲ್ಪಾಡಿ ಹಾಗೂ ವರ್ಕಾಡಿ ಪಂಚಾಯಿತಿಯ ಕಾರ್ಯಕ್ರಮಗಳ ರೂಪುರೇಶೆಗಳನ್ನು ವಿವರಿಸಲಾಯಿತು. ಕಾರ್ಯಕ್ರಮದಂಗವಾಗಿ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನಾ ಸಂಕೀರ್ತನೆ ನಡೆಯಿತು. ಕಾರ್ಯಕ್ರಮದಲ್ಲಿ ಷಷ್ಟ್ಯಬ್ಧಿ ಸಮಿತಿಯ ಮಂಜೇಶ್ವರ ವಲಯದ ಮುಖಂಡರು ಉಪಸ್ಥಿತರಿದ್ದರು. ಹರಿಣಾಕ್ಷಿ ಶಶಿಧರ ಶೆಟ್ಟಿ ಮತ್ತು ಸಾಯೀಶ್ವರೀ ಡಿ.ಶೆಟ್ಟಿ ಪ್ರಾರ್ಥನೆ ಹಾಡಿದರು. ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ಗಂಗಾಧರ ಕೊಂಡೆವೂರು ವಂದಿಸಿದರು. ಹರೀಶ್ ಮಾಡ ಕಾರ್ಯಕ್ರಮ ನಿರ್ವಹಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries