ತ್ರಿಶೂರ್: ವಿಶ್ವ ವಿಖ್ಯಾತ ತೃಶೂರ್ ಪೂರಂ ಉತ್ಸವದಲ್ಲಿ ಭಾಗವಹಿಸಲು ತೆಚಿಕೊಟುಕಾವು ರಾಮಚಂದ್ರನ್ ಎಂಬ ಆನೆಗೆ ಅನುಮತಿ ನೀಡಲಾಗಿದೆ. ಆನೆಯನ್ನು ನಿರ್ವಹಿಸಲು ಜಿಲ್ಲಾ ಮಟ್ಟದ ಸ್ಥಳೀಯ ಸಂರಕ್ಷಣಾ ಸಮಿತಿ ಅನುಮತಿ ನೀಡಿದೆ. ಅನುಮತಿ ಪಡೆದ ಬಳಿಕ ಆನೆಯನ್ನು ಹಬ್ಬಕ್ಕಾಗಿ ತೆಚಿಕೊಟುಕಾವು ಭಗವತಿ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು.
ತೆಚಿಕೊಟುಕಾವು ರಾಮಚಂದ್ರನ್ ಕೇರಳದ ಅತಿ ಎತ್ತರದ ಆನೆ. 2019 ರ ಫೆಬ್ರವರಿಯಲ್ಲಿ, ಗುರುವಾಯೂರ್ ಕೋಟೆಯಲ್ಲಿರುವ ಮನೆಯೊಂದರ ಪ್ರವೇಶೋತ್ಸವಕ್ಕೆ ಕರೆತರಲಾಗಿದ್ದ ಆನೆ ಮದವೇರಿ ಇಬ್ಬರನ್ನು ತಿವಿದು ಕೊಂದಿತ್ತು. ಆ ಬಳಿಕ ತೆಚಿಕೊಟ್ಟುಕಾವ್ ರಾಮಚಂದ್ರನ್ ನಿಗೆ ನಿಷೇಧ ಹೇರಲಾಗಿತ್ತು.
ಮಾರ್ಚ್ 2020 ರಲ್ಲಿ, ಸಾಕಾನೆ ಪರಿಪಾಲನಾ ಕೇಂದ್ರದ ಜಿಲ್ಲಾ ಮಾನಿಟರಿಂಗ್ ಸಮಿತಿಯ ಸಭೆಯಲ್ಲಿ ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ಮಾತ್ರ ಆನೆಯನ್ನು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿಸಲು ಅನುಮತಿ ನೀಡಿತ್ತು.





