ಕಾಸರಗೋಡು: ಜಿಲ್ಲೆಯ ಪರಪ್ಪದಲ್ಲಿ ಆರಂಭಿಸಲದ ಕ್ಯಾಂಪ್ಕೋ ಶಾಖೆಯನ್ನು ಕ್ಯಾಂಪ್ಕೋ ಮಾಜಿ ನಿರ್ದೇಶಕ ರಾಜಗೋಪಾಲ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕೃಷಿಕರ ಹಿತ ಕಾಯುವಲ್ಲಿ ಕ್ಯಾಂಪ್ಕೋ ಬದ್ಧವಾಗಿದ್ದು, ಮಾರುಕಟ್ಟೆ ಧೋರಣೆಯನ್ನು ಸ್ಥಿರವಾಗಿ ಕಾಯುಕೊಳ್ಳು ಮೂಲಕ ಕೃಷಿಕರ ಆಶೋತ್ತರ ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬೆಳೆಗಾರರ ಸದಸ್ಯರು ಸದಾ ಕ್ಯಾಂಪ್ಕೋ ಜತೆ ವ್ಯವಹಾರ ಮಾಡಿ ಸಂಸ್ಥೆಯ ಉನ್ನತಿ ಮತ್ತು ತನ್ಮೂಲಕ ದೇಶದೋನ್ನತಿಗೆ
ಸಹಕರಿಸಬೇಕೆಂದು ತಿಳಿಸಿದರು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕ ( ಪ್ರಭಾರ) ಕೃಷ್ಣಕುಮಾರ್, ನಿರ್ದೇಶಕರಾದ ಜಯರಾಮ ಸರಳಾಯ, ರಾಧಾಕೃಷ್ಣನ್, ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಮಹೇಶ್ ಚೌಟ, ರಾಘವೇಂದ್ರ ಭಟ್, ಜನರಲ್ ಮೆನೇಜರ್ ರೇಶ್ಮಾ ಮಲ್ಯ, ಚೀಫ್‍ಮೆನೇಜರ್ ರಾಘವೇಂದ್ರ, ರೀಜನಲ್ ಮೆನೇಜರ್ ಪ್ರದೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ನಿರ್ದೇಶಕ ಜಯರಾಮ ಸರಳಾಯ ಸ್ವಾಗತಿಸಿ ನಿರ್ದೇಶಕ ರಾಧಾಕೃಷ್ಣನ್ ವಂದಿಸಿದರು.





