ಕಾಸರಗೋಡು: ಹಸಿರು ಕೇರಳ ಮಿಷನ್‍ನ ಸಫಲಂ ಮಿಷನ್ ಅಂಗವಾಗಿ ನಡೆಸುವ ಹಸಿರು ಸಮೃದ್ಧಿ ವಾರ್ಡ್ ಕಾರ್ಯಕ್ರಮ ಅಂಗವಾಗಿ ಕೃಷಿ ನಡೆಸಿ ಯಶಸ್ವಿಯಾದವರಿಗೆ ಪನತ್ತಡಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಕೆ.ಜೇಮ್ಸ್ ಗಮನಾರ್ಹ ಯೋಜನೆಯೊಂದನ್ನು ತಮ್ಮ ವಾರ್ಡ್ ಮಟ್ಟದಲ್ಲಿ ಘೋಷಿಸಿದ್ದಾರೆ.
ತಾವು ಪ್ರತಿನಿಧಿಸುತ್ತಿರುವ 10ನೇ ವಾರ್ಡಿನಲ್ಲಿ ವಿತರಿಸುವ ತರಕಾರಿ ಸಸಿಗಳನ್ನು ವಾರ್ಡು ವ್ಯಾಪ್ತಿಯ ಕೃಷಿಕರು ಅವರ ಮನೆ ಹಿತ್ತಿಲಲ್ಲಿ ಅತ್ಯುತ್ತಮವಾಗಿ ಕೃಷಿ ನಡೆಸುವವರಿಗೆ ಮೊದಲ ಬಹುಮಾನವಾಗಿ 10, ಸಾವಿರ ರೂ., ಎರಡನೇ ಬಹುಮಾನವಾಗಿ 5 ಸಾವಿರ ರೂ., ಮೂರನೇ ಬಹುಮಾನವಾಗಿ 3 ಸಾವಿರ ರೂ. ನಂತೆ ಅವರು ನೀಡುವುದಾಗಿ ತಿಳಿಸಿದ್ದಾರೆ.
ಮೂರು ಹಂತಗಳಲ್ಲಿ ಜಾರಿಗೊಳ್ಳುವ ಈ ಯೋಜನೆಯಲ್ಲಿ ಪ್ರಥಮ ಹಂತವಾಗಿ ವಾರ್ಡಿನ ಎಲ್ಲ ಮನೆಗಳಿಗೆ ತರಕಾರಿ ಸಸಿಗಳನ್ನು ವಿತರಿಸಲಾಗುವುದು. ಎರಡನೇ ಹಂತವಾಗಿ ಅರಸಿನ, ಶುಂಠಿ, ಸುವರ್ಣ ಗೆಡ್ಡೆ ಇತ್ಯಾದಿಗಳನ್ನು ವಿತರಿಸಲಾಗುವುದು, ಮೂರನೇ ಹಂತದಲ್ಲಿ ಮತ್ತೆ ತರಕಾರಿ ಸಸಿಗಳನ್ನು ವಿತರಿಸಲಾಗುವುದು. ಒಂದು ವರ್ಷದ ಅವಧಿಯಲ್ಲಿ ಈ
ಕೃಷಿಗಳನ್ನು ಯಶಸ್ವಿಯಾಗಿ ನಡೆಸುವವರ ಬಗ್ಗೆ ನಿಗಾ ಇರಿಸಿ ಅವರಿಗೆ ಬಹುಮಾನ ನೀಡಲಾಗುವುದು. ವಾರ್ಡ್ ಸದಸ್ಯರಾಗಿರುವ ತಾವೂ ಸೇರಿದಂತೆ ರಚಿಸಲಾದ ಮಾನಿಟರಿಂಗ್ ಸಮಿತಿ ಮನೆ ಮನೆಗಳಿಗೆ ತೆರಳಿ ಕೃಷಿಯ ಬೆಳವಣಿಗೆಗಳ ಅವಲೋಕನನಡೆಸಲಿದ್ದಾರೆ.
ಈ ಸಂಬಂಧ ವಾರ್ಡುಮಟ್ಟದಲ್ಲಿ ಜರುಗಿದ ಸಮಾರಂಭದಲ್ಲಿ ತರಕಾರಿ ಸಸಿ ನೀಡುವ ಮೂಲಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಸನ್ನಾ ಪ್ರಸಾದ್ ಉದ್ಘಾಟಿಸಿದರು. ಪ್ರಾಯೋಜಕರ ಮೂಲಕ ಸಸಿಗಳನ್ನು ಸಂಗ್ರಹಿಸಿದ್ದು, ವಾರ್ಡಿನ ಎಲ್ಲ ಮನೆಗಳಿಗೂ ಸಸಿಗಳನ್ನು ವಿತರಿಸಲಾಯಿತು. ಹಸಿರು ಕೇರಳ ಯೋಜನೆ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಮುಖ್ಯ ಅತಿಥಿಯಾಗಿದ್ದರು.
ಪಿ.ಎಂ.ಕುರಿಯಾಕೋಸ್, ರಾಧಾಕೃಷ್ಣ ಗೌಡ, ಕೆ.ಕೆ.ರಾಜಗೋಪಾಲ್, ರಾಧಾ ಸುಕುಮಾರನ್, ಎನ್.ವಿನ್ಸಂಟ್, ಪ್ರೀತಿ, ಜಾರ್ಜ್‍ವರ್ಗೀಸ್, ಷಾನಿದ್, ರತೀಶ್, ಸುಮಾ, ಅಶೋಕನ್, ಪ್ರದೀಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.





