ಕಾಸರಗೋಡು: ಬಿಜೆಪಿ ಕೇರಳ ರಾಜ್ಯ ಘಟಕ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ಫೆ. 21ರಿಂದ ಕಾಸರಗೋಡಿನಿಂದ ಆರಂಭಗೊಳ್ಳಲಿರುವ 'ವಿಜಯ ಯಾತ್ರೆ'ಯ ಪ್ರಚಾರಾರ್ಥ ಬಿಜೆಪಿ ಜಿಲ್ಲಾಸಮಿತಿ ವತಿಯಿಂದ ಹೊತರಲಾದ ಭಿತ್ತಿಪತ್ರವನ್ನು ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ ಅಶೋಕ್ ಕುಮಾರ್ ಪಕ್ಷದ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್, ಉಪಾಧ್ಯಕ್ಷ, ವಕೀಲ ಸದಾನಂದ ರೈ, ಕಾಸರಗೋಡು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಕಾರ್ಯದರ್ಶಿ ಎನ್. ಸತೀಶ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು, ಉಪಾಧ್ಯಕ್ಷೆ ಅಂಜು ಜೋಸ್ಟಿ ಉಪಸ್ಥಿತರಿದ್ದರು.
21ರಂದು ಬೆಳಗ್ಗೆ 11ಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯಾತ್ರೆಗೆ ಚಾಲನೆ ನೀಡುವರು.






