HEALTH TIPS

ಈ ಕರೊನಾ ವೈರಸ್​ ಹೆಚ್ಚೂಕಡಿಮೆ ಹತ್ತು ವರ್ಷ ಕಾಡುತ್ತಂತೆ, ಜಗತ್ತನ್ನೇ ಗುಡಿಸಿ ಹಾಕುತ್ತಂತೆ!

              ನವದೆಹಲಿ: ಸುಮಾರು ಒಂದು ವರ್ಷದಿಂದ ಆತಂಕ ಹುಟ್ಟಿಸಿರುವ ಕರೊನಾ ಸೋಂಕು ಈಗೀಗ ತೀರಾ ಕಡಿಮೆಯಾಗಿದ್ದು, ಇನ್ನೇನು ಕರೊನಾತಂಕ ತಗ್ಗಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ ಎನ್ನುತ್ತಿರುವಾಗಲೇ ತೀರಾ ಆತಂಕಕ್ಕೆ ಈಡುಮಾಡುವಂಥ ಸುದ್ದಿಯೊಂದು ಹೊರಬಿದ್ದಿದೆ.

           ಕರೊನಾ ವೈರಸ್​ನ ರೂಪಾಂತರಿಯ ಪೈಕಿ ಕೆಂಟ್​ ಎಂಬ ವರ್ಗದ ವೈರಸ್​ ಲಂಡನ್​ನಲ್ಲಿ ಕಾಣಿಸಿಕೊಂಡಿದ್ದು, ಇದು ಹೆಚ್ಚೂಕಡಿಮೆ ಹತ್ತು ವರ್ಷಗಳ ಕಾಡಲಿದೆ. ಮಾತ್ರವಲ್ಲ ಜಗತ್ತನ್ನೇ ಗುಡಿಸಿ ಹಾಕಲಿದೆ ಎಂಬ ಮಾಹಿತಿಯೊಂದು ಬಹಿರಂಗಗೊಂಡಿದೆ.

          ಯುನೈಟೆಡ್​ ಕಿಂಗ್​ಡಮ್​ನ ಜೆನೆಟಿಕ್ ಸರ್ವೆಯಲೆನ್ಸ್ ಪ್ರೋಗ್ರಾಂ ಮುಖ್ಯಸ್ಥರೇ ಇಂಥದ್ದೊಂದು ಮಾಹಿತಿಯನ್ನು ನೀಡಿದ್ದಾರೆ. ಕರೊನಾದ ಕೆಂಟ್​ ವರ್ಗದ ವೈರಸ್​ ದೇಶವನ್ನೇ ಗುಡಿಸಿ ಹಾಕಿದ್ದು, ಅದು ಜಗತ್ತನ್ನೇ ಗುಡಿಸಿ ಹಾಕುವ ಸಾಧ್ಯತೆಗಳಿವೆ ಎಂದು ಕೋವಿಡ್​-19 ಜೀನೋಮಿಕ್ಸ್​ ಯಕೆ-ಕನ್ಸಾರ್ಟಿಯಂ ನಿರ್ದೇಶಕ ಶರೊನ್​ ಪೀಕಾಕ್​ ಹೇಳಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries