ಕಾಸರಗೋಡು: ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು ತಲೆಮರೆಸಿಕೊಂಡಿದ್ದ 13ಮಂದಿಯನ್ನು ಕಾಸರಗೋಡು ಡಿವೈಎಸ್ಪಿ ಪಿ.ಪಿ ಸದಾನಂದನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಲಾಗಿದೆ.
ರಹಮತ್‍ನಗರ ನಿವಾಸಿ ಅಬ್ದುಲ್ ರಹಮಾನ್, ಎರಿಯಾಲ್ ನಿವಾಸಿ ಅಬ್ದುಲ್ ಸಮೀರ್, ಎರಿಯಾಲ್ ಬಳ್ಳೂರಿನ ಅಬ್ದುಲ್ ರಹಮಾನ್, ಮಧೂರು ನಿವಾಸಿ ಎನ್.ರತೀಶ್, ಮಜಲ್ ನಿವಾಸಿ ಚಂದ್ರಹಾಸ ರೈ, ಚೆಂಗಳ ನಿವಾಸಿ ನೌಶಾದ್, ಮೊಗ್ರಾಲ್‍ಪುತ್ತೂರು ಕಲ್ಲಂಗೈ ನಿವಾಸಿ ಸತೀಶ್, ಎರಿಯಾಲ್ ನಿವಾಸಿ ಅಹಮ್ಮದ್ ಕಬೀರ್, ಎಡಚ್ಚೇರಿ ನಿವಾಸಿ ಅನ್ಸಾಫ್, ಬಳ್ಳೂರಿನ ಮಹಮ್ಮದ್ ಸಮೀರ್, ಕೂಡ್ಲು ಆರ್‍ಡಿ ನಗರ ಆನಂದ ಶೆಟ್ಟಿ, ಮೇಲ್ಪರಂಬ ನಿವಾಸಿ ಅಬ್ದುಲ್ ಶೆಫೀಕ್, ಚೂರಿ ನಿವಾಸಿ ಸಜೀದ್ ಬಂಧಿತರು.
ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು, ತಲೆಮರೆಸಿಕೊಂಡಿರುವವರನ್ನು ಪತ್ತೆಹಚ್ಚಲು ಡಿವೈಎಸ್ಪಿ ನೇತೃತ್ವದಲ್ಲಿ 14 ತಂಡ ರಚಿಸಲಾಗಿದೆ.





