HEALTH TIPS

ವಿಧಾನಸಭೆ ಚುನಾವಣೆ: ಕಾಸರಗೋಡು ಜಿಲ್ಲೆಯಲ್ಲಿ 15 ತಾಕಾಲಿಕ ಬೂತ್ ಗಳ ನಿರ್ಮಾಣ: ಮಾ.4 ವರೆಗೆ ಕೊಟೇಷನ್ ಸಲ್ಲಿಕೆಗೆ ಅವಕಾಶ

 

       ಕಾಸರಗೋಡು: ವಿಧಾನಸಭೆ ಚುನಾವಣೆ ಸಂಬಂಧ ಕೋವಿಡ್ ಮಾನದಂಡಗಳನ್ನು ಪಾಲಿಸಿ 15 ಕಡೆಗಳಲ್ಲಿ ತಾತ್ಕಾಲಿಕ ಬೂತ್ ಗಳನ್ನು ನಿರ್ಮಿಸಲಾಗುವುದು. 


              ಮಹಿಳೆಯರಿಗೆ ಪ್ರತ್ಯೇಕ ಕೌಂಟರ್, ವಿಶೇಷಚೇತನರಿಗೆ ರಾಂಪ್, ಕುಡಿಯುವ ನೀರಿನ ಸೌಲಭ್ಯ ಸಹಿತ ಬೂತ್ ಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೊಟೇಷನ್ ಕೋರಿದ್ದಾರೆ. ಸ್ಟೀಲ್ ಟ್ರಸ್ ವರ್ಕ್, ಮೇಲ್ಛಾವಣಿ, ಸೀಲಿಂಗ್ ಕಾರ್ಪೆಟ್, ಪ್ಲಾಸ್ಟ್ ಕುರ್ಚಿಗಳು, ವಿ.ಐ.ಪಿ. ಆಸನಗಳು, ಮೇಜುಗಳು, ಸೀಲಿಂಗ್ ಬಟ್ಟೆ ಬಳಸಿದ ಪಗೋಈಡಾ ಚಪ್ಪರ, ಕಬ್ಬಿಣದ ಬಾರಿಕೇಡ್ ಗಳು, ಬಿದಿರು ಸಹಿತದ ಬಟ್ಟೆಗಳು, ಎರಡು ದಿನಗಳ ಮಟ್ಟಿಗೆ ಕುಡಿಯುವ ನೀರಿನ ಸೌಲಭ್ಯ, ಜನರೇಟರ್ ಗಳು ಇತ್ಯಾದಿ ಬಳಸಿದ ತಾತ್ಕಾಲಿಕ ವ್ಯವಸ್ಥೆ ನಡೆಸಬೇಕಿದೆ. 

        ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಕುಂಜತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣ, ಎಂ.ಜಿ.ಎಲ್.ಸಿ. ಕೆದಂಪಾಡಿ, ಬೆಜ್ಜ ಅಂಗನವಾಡಿ ಪ್ರದೇಶಗಳಲ್ಲಿ, ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಮೀಪುಗುರಿ ಅಂಗನವಾಡಿ, ಕಾಂತಿಕರೆ ಅಂಗನವಾಡಿ, ಉದುಮಾ ವಿಧಾನಸಭೆ ಕಎತ್ರದಲ್ಲಿ ಕಳನಾಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾಞಂಗಾಡ್ ವಿಧಾನಸಭೆ ಕ್ಷೇತ್ರದಲ್ಲಿ ಕಲ್ಲಂತೋಳ್ ಕುಟುಂಬ ಕಲ್ಯಾಣ ಉಪಕೇಂದ್ರ ಆವರಣ, ತ್ರಿಕರಿಪುರ ವಿಧಾನಸಭೆ ಕ್ಷೇತ್ರದಲ್ಲಿ ಕೊಳತ್ತುಕಾಡ್ ಮಲ್ಟಿ ಗ್ರೇಡ್ ಲನಿರ್ಂಗ್ ಸೆಂಟರ್, ಗೋಕಡವು ಉದಯ ಆಟ್ರ್ಸ್ ಆಂಡ್ ರೀಡಿಂಗ್ ರೂಂ, ಪಾವಲ್ ಭಾವನಾ ಕ್ಲಬ್ ಆಂಡ್ ರೀಡಿಂಗ್ ರೂಂ, ಪೆÇಂಙಲ್ ಸಾಂಸ್ಕøತಿಕ ಕೇಂದ್ರ, ತೊಟ್ಟಂಚಾಲ್ ಉದಯ ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್, ನಾರ್ತ್ ತ್ರಿಕರಿಪುರ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಕೊಯಕ್ಕರ ಪ್ರದೇಶಗಳಲ್ಲಿ ತಾತ್ಕಾಲಿಕ ಬೂತ್ ಗಳನನುನಿರ್ಮಿಸಲಾಗುವುದು. 

       ಮಾ.3ರಂದು ಮಧ್ಯಾಹ್ನ 3 ಗಂಟೆಗೆ ಮುಂಚಿತವಾಗಿ ಕೊಟೇಷನ್ ಸಲ್ಲಿಸಬೇಕು. ಮಾ.6 ರಂದು ಸಂಜೆ 4 ಗಂಟೆಗೆ ಮುಂಚಿತವಾಗಿ ಬೂತ್ ಗಳ ನಿರ್ಮಾಣ ನಡೆಯಬೇಕಿದೆ. ಹೆಚ್ಚುವರಿ ಮಾಹಿತಿಗೆ ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ವಿಭಾಗವನ್ನು ಸಂಪರ್ಕಿಸಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries