ಕಾಸರಗೋಡು:ಅಭಿವೃದ್ಧಿಕಾರ್ಯಗಳು ನಿರಂತರ ಸಾಗುತ್ತಿರಬೇಕಾದರೆ, ಕೇರಳದಲ್ಲಿ ಎಡರಂಗವನ್ನು ಮತ್ತೆ ಅಧಿಕಾರಕ್ಕೇರಿಸುವಂತೆ ಕೇರಳ ಕೋ ಓಪರೇಟಿವ್ ಎಂಪ್ಲೋಯೀಸ್ ಯೂನಿಯನ್(ಕೆಸಿಇಯು)ಕಾಸರಗೋಡು ಏರಿಯಾ ಸಮಿತಿ ಸಮ್ಮೇಳನ ಠರಾವಿನ ಮೂಲಕ ವಿನಂತಿಸಿದೆ.
ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಮ್ಮೇಳನ ಉದ್ಘಾಟಿಸಿದರು. ಏರಿಯಾ ಸಮಿತಿ ಅಧ್ಯಕ್ಷ ಕೆ. ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಅಶೋಕ್ ರೈ, ಸಿಐಟಿಯು ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ. ರವೀಂದ್ರನ್ ಮುಂತಾದವರು ಉಪಸ್ಥಿತರಿದ್ದರು. ಏರಿಯಾ ಸಮಿತಿ ಕಾರ್ಯದರ್ಶಿ ಬಿ.ಮೋಹನನ್ ಚಟುವಟಿಕಾ ವರದಿ, ರಾಜ್ಯ ಸಮಿತಿ ಸದಸ್ಯೆ ಪಿ. ಜಾನಕಿ ಸಂಘಟನಾ ವರದಿ ಮಂಡಿಸಿದರು. ಎಸ್. ಸುನಿಲ್ ಸ್ವಾಗತಿಸಿದರು.




