ಕಾಸರಗೋಡು: ವಿಧಾನಸಭೆ ಕ್ಷೇತ್ರಗಳ ಚುನಾವಣೆಯ ಪೂರ್ವಭಾವಿಯಾಗಿ ಮತದಾತರ ಜಾಗೃತಿ ಅಂಗವಾಗಿ ಸ್ವೀಪ್ ಕಾಞಂಗಾಡ್ ವಿದಾನಸಭೆ ಕ್ಷೇತ್ರ ಮಟ್ಟದ ಚಟುವಟಿಕೆಗಳಿಗೆ ಚಾಲನೆ ಲಭಿಸಿದೆ.
ಹೊಸದುರ್ಗ ತಹಸೀಲ್ದಾರ ಪಿ.ಪ್ರೇಮರಾಜ್ ಉದ್ಘಾಟಿಸಿದರು. ಕಾಞಂಗಾಡ್ ಡಿ.ಡಿ.ಪಿ.ಒ. ಬೇಬಿ ಪಿ. ಅಧ್ಯಕ್ಷತೆ ವಹಿಸಿದ್ದರು. ಶಾಲಾ ಕೌನ್ಸಿಲರ್ ಗಳಾದ ಅನಿತಾ, ಅಮೃತಾ, ಗೌರಿ ಉಪಸ್ಥಿತರಿದ್ದರು. ಎನ್.ಎನ್.ಎಂ.ಬ್ಲೋಕ್ ಸಂಚಾಲಕ ಅಶ್ವತ್ ಸ್ವಾಗತಿಸಿದರು. ಐ.ಸಿ.ಡಿ.ಎಸ್.ಕಾಞಂಗಾಡ್ ಹಿರಿಯ ಗುಮಾಸ್ತ ಆಶಾಲಾತ ವಂದಿಸಿದರು.




