ಕಾಸರಗೋಡು: ವಿಧಾನಸಭೆ ಚುನಾವಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ 1591 ಮತಗಟ್ಟೆಗಳು ಸಜ್ಜುಗೊಂಡಿವೆ.
ಮಂಜೇಶ್ವರ, ಕಾಸರಗೋಡು, ಉದುಮಾ, ಕಾಞಂಗಾಡು, ತ್ರಿಕರಿಪುರ ವಿಧಾನಸಭೆ ಕ್ಷೇತ್ರಗಳ ಮತಗಟ್ಟೆಗಳು ಸಜ್ಜಾಗಿವೆ. ಇವುಗಳಲ್ಲಿ 983 ಪ್ರಧಾನ ಮತಗಟ್ಟೆಗಳು, 608 ತಾತ್ಕಾಲಿಕ ಮತಗಟ್ಟೆಗಳು ಇವೆ. ಮಂಜೇಶ್ವರ ಮತ್ತು ಕಾಞಂಗಾಡು ವಿಧಾನಸಭೆ ಕ್ಷೇತ್ರಗಲಲ್ಲಿ ಅತ್ಯಧಿಕ (336)ಮತಗಟ್ಟೆಗಳಿವೆ. ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಅತಿ ಕಡಿಮೆ(296) ಮತಗಟ್ಟೆಗಳಿವೆ.
ವಿಧಾನಸಭೆ ಕ್ಷೇತ್ರ : ಒಟ್ಟು ಮತಗಟ್ಟೆಗಳು-ಪ್ರಧಾನ ಮತಗಟ್ಟೆಗಳು-ತಾತ್ಕಾಲಿಕ ಮತಗಟೆಗಳು ಎಂಬ ಕ್ರಮದಲ್ಲಿ :
ಮಂಜೇಶ್ವರ : 336-205-131.
ಕಾಸರಗೋಡು : 296-190-106.
ಉದುಮಾ : 316-198-118.
ಕಾಞಂಗಾಡು: 336-196-140.
ತ್ರಿಕರಿಪುರ : 307-194-113.






