HEALTH TIPS

ಸುರಕ್ಷತಾ ಮಾನದಂಡ: ಹೊಸ ಕಾರುಗಳಲ್ಲಿ 2 ಏರ್ ಬ್ಯಾಗ್‌ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

         ನವದೆಹಲಿ: ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಹೊಸ ಕಾರುಗಳಲ್ಲಿ ಇನ್ನುಮುಂದೆ ಎರಡೆರಡು ಏರ್ ಬ್ಯಾಗ್ ಗಳು ಇರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ.



         ಈ ಬಗ್ಗೆ ಕೇಂದ್ರ ಸರ್ಕಾರ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ನಿಯಮವನ್ನು ಘೋಷಣೆ ಮಾಡಿದೆ. ಅದರಂತೆ ಇನ್ನು ಮುಂದೆ ಎಲ್ಲಾ ಹೊಸ ಕಾರುಗಳಲ್ಲಿ ಏಪ್ರಿಲ್ 1ರಿಂದ ಡ್ಯುಯಲ್‌ ಫ್ರಂಟ್‌ ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿದೆ.

       ಪ್ರಸ್ತುತ ಈಗಾಗಲೇ ನಿರ್ಮಾಣ ಮಾಡಿರುವ ಕಾರುಗಳಿಗೂ ಆಗಸ್ಟ್ ನಿಂದ ಡ್ಯುಯಲ್ ಏರ್ ಬ್ಯಾಗ್ ಗಳನ್ನು ಅಳವಡಿಸಿ ಮಾರಾಟ ಮಾಡುವಂತೆ ಸೂಚನೆ ನೀಡಿದೆ. ಅಲ್ಲದೆ ಈ ಸಂಬಂಧ ಗೆಜೆಟ್ ಅಧಿಸೂಚನೆ ಕೂಡ ಹೊರಡಿಸಿದೆ.

ರಸ್ತೆ ಸುರಕ್ಷತಾ ಮಾನದಂಡಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸಮಿತಿಯ ಸಲಹೆಗಳನ್ನು ಆಧರಿಸಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ ಎಂದು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಮಾರ್ಕ್ ಅಡಿಯಲ್ಲಿ ಏರ್‌ಬ್ಯಾಗ್‌ ಎಐಎಸ್ 145 ಗುಣಮಟ್ಟದ ಸಾಧನಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

          ಸಾಮಾನ್ಯವಾಗಿ ಕಾರು ಅಪಘಾತಗಳು ಸಂಭವಿಸಿದಾಗ ಕಾರಿನ ಮುಂಭಾಗದಲ್ಲಿ ಕುಳಿತವರಿಗೆ ತಲೆಗೆ ಪೆಟ್ಟಾಗಿ ಸಾಯುವ ಸಂಭವ ಹೆಚ್ಚು. ಆದರೆ ಇಂತಹ ಸಂದರ್ಭಗಳಲ್ಲಿ ಕಾರಿನಲ್ಲಿ ಅಳವಡಿಸಲಾಗುವ ಏರ್ ಬ್ಯಾಗ್ ಗಳು ಅಪಘಾತದ ಸಂದರ್ಭದಲ್ಲಿ ತಲೆಗೆ ಆಗುವ ಸಂಭಾವ್ಯ ಪೆಟ್ಟನ್ನು ಬಹುತೇಕ ತಡೆಯುತ್ತದೆ. ಇದೇ ಕಾರಣಕ್ಕೆ ಏರ್ ಬ್ಯಾಗ್ ಗಳನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries