ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 4 ಮಂದಿ ಅಭ್ಯರ್ಥಿಗಳಿಂದ ನಾಮಪತ್ರಿಕೆ ಸಲ್ಲಿಸಿದ್ದಾರೆ. ಉದುಮಾ, ಕಾಞಂಗಾಡ್, ತ್ರಿಕರಿಪುರ ವಿಧಾನಸಭೆ ಕ್ಷೇತ್ರಗಳ ತಲಾ ಒಬ್ಬ ಅಭ್ಯರ್ಥಿ ಮತ್ತು ಕಾಸರಗೋಡು ವಿಧಾನಸಭೆ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ನಾಮಪತ್ರಿಕೆ ಸಲ್ಲಿಸಿದರು.
ಉದುಮಾ ಕ್ಷೇತ್ರದ ಸಿ.ಪಿ.ಎಂ. ಅಭ್ಯರ್ಥಿ ಸಿ.ಎಚ್.ಕುಂಞಂಬು, ಕಾಞಂಗಾಡ್ ಕ್ಷೇತ್ರದ ಸಿ.ಪಿ.ಐ ಅಭ್ಯರ್ಥಿ ಇ.ಚಂದ್ರಶೇಖರನ್, ತ್ರಿಕರಿಪುರ ವಿಧಾನಸಭೆ ಕ್ಷೇತ್ರದ ಸಿ.ಪಿ.ಎಂ.ಅಭ್ಯರ್ಥಿ ಎಂ.ರಾಜಗೋಪಾಲನ್ ಮತ್ತು ಕಾಸರಗೋಡು ವಿಧಾನಸಭೆ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ನಿಷಾಂತ್ ಕುಮಾರ್ ಎ.ಬಿ. ತಮ್ಮ ನಾಮಪತ್ರಿಕೆ ಸಲ್ಲಿಸಿದರು.



