ಕಾಸರಗೋಡು: ಜಿಲ್ಲೆಯಲ್ಲಿ 4 ಸಾವಿರ ಮಂದಿ ಕೋವಿಡ್ ಮುಂಚೂಣಿ ಹೋರಾಟಗಾರರಿಗೆ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕೋವಿಡ್ ವಾಕ್ಸಿನ್ ನೀಡಲಾಗಿದ್ದು, ಇವರಿಗಿರುವ ಎರಡನೇ ಹಂತದ ಡೋಸ್ ಮಾ.18,22, 25,29 ಹಾಗೂಏ.1ರಂದು ಜಿಲ್ಲೆಯ 6 ಕೇಂದ್ರಗಳಲ್ಲಿ ನೀಡಲಾಗುವುದು.
ಮಂಜೇಶ್ವರ ಕುಟುಂಬ ಆರೋಗ್ಯ ಕೇಂದ್ರ, ಕಯ್ಯೂರು ಕುಟುಂಬ ಆರೋಗ್ಯ ಕೇಂದ್ರ, ಪಡನ್ನ ಕುಟುಂಬ ಆರೋಗ್ಯ ಕೇಂದ್ರ, ಕುಂಬಳೆ ಸಮುದಾಯ ಆರೋಗ್ಯ ಕೇಂದ್ರ, ಉದುವi ಕುಟುಂಬ ಆರೋಗ್ಯ ಕೇಂದ್ರ,ಅಜಾನೂರು ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ನಡೆಯಲಿದೆ. ಎರಡನೇ ಡೋಸ್ 28 ರಿಂದ 42 ದಿನಗಳ ಅವಧಿಯಲ್ಲಿ ಪಡೆಯಬೇಕಿದೆ. ನಿಖರವಾಗಿ 28 ದಿನದಲ್ಲೇ ಡೋಸ್ ವ್ಯಾಕ್ಸೀನ್ ಪಡೆಯಬೇಕು. ಮೊದಲ ಡೊಸ್ ಪಡೆದು 28 ದಿನಗಳು ಪೂರ್ಣಗೊಂಡಿರುವ ಸಿಬ್ಬಂದಿ ಸಂಬಂಧಪಟ್ಟ ಕೇಂದ್ರಗಳಿಗೆ ಹಾಜರಾಗುವಂತೆ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.



