ನವದೆಹಲಿ: ಈವರೆಗೆ ಒಟ್ಟಾರೇ, 42 ಸಾವಿರದ 848 ರಕ್ಷಣಾ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿರುವುದಾಗಿ ರಕ್ಷಣಾ ಖಾತೆ ಸಹಾಯಕ ಸಚಿವ ಶ್ರೀಪಾದ್ ನಾಯಕ್ ರಾಜ್ಯಸಭೆಯಲ್ಲಿ ನಿನ್ನೆ ತಿಳಿಸಿದರು.
ಭೂ ಸೇನೆಯಲ್ಲಿ 32,690 ಕೋವಿಡ್-19 ಪಾಸಿಟಿವ್ ದಾಖಲಾಗಿದ್ದು, ಶೇ. 0.24 ರಷ್ಟು ಮರಣ ಪ್ರಮಾಣವಿರುವುದಾಗಿ ನಾಯಕ್ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ಭಾರತೀಯ ವಾಯುಪಡೆ ಮತ್ತು ನೌಕಪಡೆಯಲ್ಲಿ ಕ್ರಮವಾಗಿ 6,554 ಮತ್ತು 3,604 ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡುಬಂದಿರುವುದಾಗಿ ಎಂದು ಅವರು ಉಲ್ಲೇಖಿಸಿದ್ದಾರೆ.
ರಕ್ಷಣಾ ಸಿಬ್ಬಂದಿ ಸಾವಿನ ಪ್ರಮಾಣ ಕ್ರಮವಾಗಿ 0.39% ಮತ್ತು 0.05% ರಷ್ಟಿದೆ. ನಿಯಮಗಳ ಪ್ರಕಾರ, ಸೇವೆಯಲ್ಲಿರುವಾಗ ಸಾಂಕ್ರಾಮಿಕ ಕಾಯಿಲೆಯಿಂದ ಸಂಭವಿಸುವ ಸಾವುಗಳಿಗೆ ಯಾವುದೇ ವಿಶೇಷ ಪರಿಹಾರವನ್ನು ಸಶಸ್ತ್ರ ಪಡೆ ಸಿಬ್ಬಂದಿಗೆ ನೀಡಲಾಗುವುದಿಲ್ಲ ಎಂದು ಅವರು ಹೇಳಿದರು.



