ಕೊಚ್ಚಿ: ಕೇರಳದ ಸಾಲದ ಹೊರೆ ಹೆಚ್ಚುತ್ತಿದೆ. ಈ ಬಗ್ಗೆ ಆಘಾತಕಾರಿ ಅಂಕಿ ಅಂಶಗಳು ಹೊರಬರುತ್ತಿವೆ. ತಲಾ ಸಾಲ 55,778.34 ರೂ.ರಷ್ಟು ಕಳೆದ ಐದು ವರ್ಷಗಲಲ್ಲಿ ಏರಿಕೆಯಾಗಿದೆ. ಪಿಣರಾಯಿ ಸರ್ಕಾರ 5 ವರ್ಷಗಳಲ್ಲಿ 84,457.49 ಕೋಟಿ ರೂ.ಗಳನ್ನು ಎರವಲು ಪಡೆದಿರುವುದು ಗಮನಾರ್ಹ.
ಯುಡಿಎಫ್ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದ ಒಟ್ಟು ಸಾಲ 1,09,730.97 ಕೋಟಿ ರೂ.ಇತ್ತು. ಪ್ರಸ್ತುತ 1,94,188.46 ಕೋಟಿ ರೂ.ಏರಿಕೆಯಾಗಿದೆ. ಎಡ ಸರ್ಕಾರದ ಅವಧಿಯಲ್ಲಿ ಸಾಲದ ಹೆಚ್ಚಳ ಶೇ 77 ರಷ್ಟು ಎಂಬುದು ವರದಿ. ಈ ಸರ್ಕಾರವು ಪ್ರತಿ ತಿಂಗಳು ಸರಾಸರಿ 1481.71 ಕೋಟಿ ರೂ.ಸಾಲ ಮಾಡಿದೆ. ಹೀಗಾಗಿ, 57 ತಿಂಗಳಲ್ಲಿ 84,457.49 ಕೋಟಿ ರೂ.ಸಾಲದ ಒಟ್ಟು ಮೊತ್ತವಾಗಿ ಪರಿಗಣಿಸಬಹುದಾಗಿದೆ.
ಉಮ್ಮನ್ ಚಾಂಡಿ ಸರ್ಕಾರವು 2016 ರಲ್ಲಿ ಪಿಣರಾಯಿ ವಿಜಯನ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದಾಗ, ಪ್ರತಿಯೊಬ್ಬ ಕೇರಳಿಗರ ತಲಾ ಸಾಲ 32,129.23 ರೂ.ಆಗಿತ್ತು. 5 ವರ್ಷಗಳಲ್ಲಿ, ತಲಾ ಸಾಲ 55,778.34 ರೂಗಳಿಗೆ ಏರಿದೆ. ಈ ಮೊತ್ತವನ್ನು ಕೇಂದ್ರ ಸರ್ಕಾರ ಮತ್ತು ವಿವಿಧ ಸಂಸ್ಥೆಗಳಿಂದ ಎರವಲು ಪಡೆಯಲಾಗಿದೆ. ಇದು 2016-17ರ ಆರ್ಥಿಕ ವರ್ಷದಲ್ಲಿ 16,151.89 ಕೋಟಿ ರೂ., 2017-18ರಲ್ಲಿ 17,101.66 ಕೋಟಿ ರೂ., 2018-19ರಲ್ಲಿ 15,249.92 ಕೋಟಿ ರೂ., 2019-20ರಲ್ಲಿ 16,405.76 ಕೋಟಿ ಮತ್ತು 2020-21ರಲ್ಲಿ 19,548.26 ಕೋಟಿ ರೂ.
ಎಲ್ಲವನ್ನೂ ಸರಿಯಾಗಿ ಮಾಡಿದೆ ಎಂದು ಹೇಳಿಕೊಳ್ಳುವ ಎಡರಂಗ, 5 ವರ್ಷಗಳನ್ನು ಪೂರೈಸಿದಾಗ ಬೊಕ್ಕಸಕ್ಕೆ ಭಾರಿ ಹೊರೆ ಉಂಟಾಗಿದೆ. ಥಾಮಸ್ ಐಸಾಕ್ಸ್ ಅವರ ಅನಿರ್ದಿಷ್ಟ ಹಣಕಾಸು ನಿರ್ವಹಣೆಯಿಂದಾಗಿ ಈ ಎಡವಟ್ಟುಗಳು ಉಂಟಾಗಿದೆ ಎಂದು ಆರೋಪಿಸಲಾಗಿದೆ. ಯಾವುದೇ ಸಂದರ್ಭದಲ್ಲಿ, ಈ ಹೊಣೆಗೇಡಿತನವನ್ನು ತೊಡೆದುಹಾಕಲು ಮುಂದಿನ ಸರ್ಕಾರ ಶ್ರಮಿಸಬೇಕಾಗುತ್ತದೆ.






