HEALTH TIPS

ಮಾಸ್ಕ್ ಕಡ್ಡಾಯ: ಮಾಸ್ಕ್ ಇಲ್ಲದೇ ಅಡ್ಡಾಡಿದರೆ ಶಿಕ್ಷೆ: ಈ ವರೆಗೆ 88552 ಮಂದಿ ವಿರುದ್ಧ ಕೇಸು:

         ಕಾಸರಗೋಡು: ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಅಡಡ್ಡಾಡುವವರನ್ನು ಪತ್ತೆ ಮಾಡಲು ಪೆÇಲೀಸರ, ಸೆಕ್ಟರಲ್ ಮೆಜಿಸ್ಟ್ರೇಟರ ಜೊತೆಗೆ ಇನ್ನು ಮುಂದೆ ವಿಧಾನಸಭೆ ಕ್ಷೇತ್ರ ಚುನಾವಣೆ ಸಂಬಂಧ ನೇಮಕಗೊಂಡಿರುವ ಕ್ಷಿಪ್ರದಳವೂ(ಫ್ಲಯಿಂಗ್ ಸ್ಕ್ವಾಡ್) ಇರುವುದು. 


      ಮಾಸ್ಕ್ ಇಲ್ಲದೇ ಸಂಚರಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಳಗೊಳ್ಳುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 88552 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿ, ದಂಡ ವಸೂಲಿ ಮಾಡಿದ್ದಾರೆ. ಮಾಸ್ಕ್ ಧರಿಸದೇ ಅಡ್ಡಾಡಿದರೆ 500 ರೂ. ದಂಡ ಹೇರಲಾಗುತ್ತಿದೆ. ದಿನವೊಂದಕ್ಕೆ ಕನಿಷ್ಠ, ಸರಾಸರಿ 200 ಮಂದಿ ಮಾಸ್ಕ್ ಧರಿಸದ ಕಾರಣ ಪೆÇಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ ಎಂದು ಈ ಗಣನೆ ತಿಳಿಸುತ್ತಿದೆ. 

          ಕೋವಿಡ್ 19 ಪ್ರತಿರೋಧ ಸಂಹಿತೆ ಉಲ್ಲಂಘನೆ ನಡೆಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 11796 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. 1359 ವಾಹನಗಳನ್ನು ವಶಪಡಿಸಲಾಗಿದೆ. 

                   ಕೋವಿಡ್ ಗೆ ಕದ ತೆರೆಯದಿರಿ...

     ಚುನಾವಣೆಯ ಪ್ರಚಾರದ ಬಿರುಸಿನ ನಡುವೆ ಮಾಸ್ಕ್ ಧಾರಣೆಯನ್ನು ಮರೆಯಕೂಡದು. ಮಾಸ್ಕ್ ಎಂದಾಗಲೇ ಮೂಗು ಮುರಿಯುವ ಮಂದಿ ಮುಂದೆ ಬೃಹತ್ ದುರಂತಕ್ಕೆ ಕಾರಣರಾಗುವ ಭೀತಿಯಿದೆ. ಕೋವಿಡ್ ಯಾವ ಕ್ಷಣದಲ್ಲೂ ಕದ ತಳ್ಳಿ ಒಳಪ್ರವೇಶಿಸುವ ಭೀತಿಯಿದೆ. ಮೂಗು-ಬಾಯಿ ಭದ್ರವಾಗಿ ಮುಚ್ಚಿಕೊಳ್ಳುವ ರೀತಿ ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು. ಯಾರಾದರೂ ಮಾತನಾಡುವ ವೇಳೆ ಮಾಸ್ಕ್ ಸರಿಸುತ್ತಿದ್ದರೆ, ಮಾಸ್ಕ್ ಧರಿಸಿಯೇ ವ್ಯವಹರಿಸುವಂತೆ ತಿಳಿಸಬೇಕು ಎಂದು ಸಂಬಂಧಪಟ್ಟವರು ಎಚ್ಚರಿಕೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries