HEALTH TIPS

ಮೆಟ್ರೊ ಮ್ಯಾನ್ ಮಹಾನ್ ನಾಯಕರಾಗುವ ಸಾಮಥ್ರ್ಯ ಹೊಂದಿದ್ದಾರೆ; ಮಿಸೈಲ್ ಮ್ಯಾನ್ ಭವಿಷ್ಯ ನುಡಿದಿದ್ದ ವೀಡಿಯೋ ವೈರಲ್

                 ಕೊಚ್ಚಿ: ಮೆಟ್ರೊ ಮ್ಯಾನ್ ಇ ಶ್ರೀಧರನ್ ಅವರ ಬಗ್ಗೆ ಭಾರತೀಯರಿಗೆ ಪರಿಚಯ ಅಗತ್ಯವಿಲ್ಲ. ಅವರು ದೇಶಕ್ಕಾಗಿ ಅನೇಕ ಸೇವೆಗಳನ್ನು ಮಾಡಿದ್ದಾರೆ. ಇತರರು ಕೈಗೊಳ್ಳಲು ಹಿಂಜರಿಯುವ ಅನೇಕ ಯೋಜನೆಗಳನ್ನು ಅವರು ಸುಲಭವಾಗಿ ಪೂರ್ಣಗೊಳಿಸಿದ್ದಾರೆ ಮತ್ತು ಯಶಸ್ವಿಯಾಗಿ ಹಸ್ತಾಂತರಿಸಿದ್ದಾರೆ. ಭಾರತದ ಸಾರ್ವಕಾಲಿಕ ಶ್ರೇಷ್ಠ ರಾಷ್ಟ್ರಪತಿಗಳಲ್ಲಿ ಒಬ್ಬರಾದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಇ.ಶ್ರೀಧರನ್ ಬಗ್ಗೆ ಹಿಂದೊಮ್ಮೆ ಮಾತನಾಡಿದ್ದರು. ಈಗ ಸಾರ್ವಜನಿಕ ಸೇವೆಗಾಗಿ ಚುನಾವಣಾ ಕಣಕ್ಕಿಳಿದಿರುವ ಪಾಲಕ್ಕಾಡ್ ನ ಬಿಜೆಪಿ ಅಭ್ಯರ್ಥಿ ಇ.ಶ್ರೀಧರನ್ ಅವರ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರ ಮಾತುಗಳು ಈಗ ವೈರಲ್ ಆಗುತ್ತಿವೆ.


         ಭಾರತದ ಕ್ಷಿಪಣಿ ಮ್ಯಾನ್ ಮೆಟ್ರೊ ಮ್ಯಾನ್ ಅವರನ್ನು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪ್ರಶಂಸಿಸಿದ್ದರು. ಇದರ ವಿಡಿಯೋವನ್ನು ಇ.ಶ್ರೀಧರನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ನಿನ್ನೆ ಬಿಡುಗಡೆ ಮಾಡಿದ್ದಾರೆ. ಕಲಾಮ್ ವೀಡಿಯೊದಲ್ಲಿ ಹೇಳಿದಂತೆ. ಇ.ಶ್ರೀಧರನ್ ಎಂಬ ವ್ಯಕ್ತಿಯು ತನ್ನ ಕಾರ್ಯಗಳನ್ನು ಪ್ರಾಮಾಣಿಕತೆಯಿಂದ ಮಾಡುವ ಮೂಲಕ ಯಶಸ್ಸನ್ನು ಸಾಧಿಸಿದ್ದಾನೆ. ಅವರು ತಮ್ಮ ಕೆಲಸದಲ್ಲಿ ಸದಾ ನಿರತರಾಗಿರುತ್ತಾರೆ. ಕೇರಳದಲ್ಲಿ ಶ್ರೇಷ್ಠ ನಾಯಕನಾಗುವ ಸಾಮಥ್ರ್ಯ ಅವರಿಗಿದೆ. ಅವರು 2 ಮಿಲಿಯನ್ ಜನರ ಮನಸ್ಸನ್ನು ಸೆರೆಹಿಡಿದಿದ್ದಾರೆ ಎಂಬ ಮಾತುಗಳನ್ನು ಕಲಾಂ ಆಡಿದ್ದರು. 

         ಭಾರತದ ಮಹಾನ್ ಪುತ್ರನ ಬಗ್ಗೆ ನೆನಪಿಸಲು ನಾನು ಈ ಅವಕಾಶವನ್ನು ತೆಗೆದುಕೊಳ್ಳುತ್ತೇನೆ ಎಂದು ಇ.ಶ್ರೀಧರನ್ ಅವರ ಆತ್ಮೀಯ ಸ್ನೇಹಿತರೊಬ್ಬರು ಸಂಗ್ರಹಿಸಿ ಕಳುಹಿಸಿದ ವೀಡಿಯೊ ಕ್ಲಿಪಿಂಗ್ ನ್ನು ಪ್ರಸ್ತುತಪಡಿಸಲಾಗಿದೆ. ಅಲ್ಲಿ ಡಾ. ಕಲಾಂ ನನ್ನ ಬಗ್ಗೆ ಮಾತನಾಡಿದರು ಎಂದು ಶ್ರೀಧರನ್ ಪೋಸ್ಟ್ ನಲ್ಲಿ ಬರೆದಿದ್ದಾರೆ. 

          I take this opportunity to reminisce about the great son of India Dr. Abdul Kalam. I present to you a video clipping sent to me by a dear friend, where Dr. Kalam is talking about me. Pranams and gratitude to the MissileMan. 🙏🏼 pic.twitter.com/PZwjQ2Vfbq

— Metroman E Sreedharan (@TheMetromanS) March 20, 2021

     ಭಾರತದ ಸಾರಿಗೆ ವ್ಯವಸ್ಥೆಯ ಮುಖಚರ್ಯೆಯನ್ನು ಬದಲಿಸಿದ ಮೆಟ್ರೋ ರೈಲು ಮತ್ತು ಕೊಂಕಣ ರೈಲ್ವೆ ನಿರ್ಮಾಣದೊಂದಿಗೆ ಶ್ರೀಧರನ್ ಎಲಾತುಲಪ್ಪಿಲ್ ನ ಮೆಟ್ರೊ ಮ್ಯಾನ್ ಆದರು. ಇವುಗಳಲ್ಲಿ ಯಾವುದೂ ಸುಲಭವಲ್ಲ. ವಿವಿಧ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ ಅವರು ಈ ಸಾಧನೆಗಳನ್ನು ಮಾಡಿರುವರು. ರೈಲ್ವೆಯ ಭಾಗವಾಗಿ ಅವರ 36 ವರ್ಷಗಳ ಸೇವಾವಧಿಯಲ್ಲಿ ಮೊದಲ 15 ವರ್ಷಗಳಲ್ಲಿ, 25 ಸ್ಥಳಗಳಿಗೆ ನಿರಂತರ ವರ್ಗ ಮಾಡಲಾಗುತ್ತಿತ್ತು. ಆದರೆ ಶ್ರೀಧರನ್ ಅವರೇ ಹಲವಾರು ನಿರ್ಮಾಣ ಯೋಜನೆಗಳ ನಾಯಕತ್ವಕ್ಕೆ ಬಡ್ತಿ ಪಡೆಯುತ್ತಿದ್ದರೆಂಬುದು ಇಲ್ಲಿ ಉಲ್ಲೇಖಾರ್ಹ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries