ತಿರುವನಂತಪುರ: ತಿರುವನಂತಪುರದಲ್ಲಿ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳಿಗೆ ವಿಶೇಷ ರೈಲು ಸೇವೆ ಒದಗಿಸಲಾಗಿದೆ. ಇಂದಿನಿಂದ ಮಾರ್ಚ್ 12 ರವರೆಗೆ ಮಂಗಳೂರು ಮತ್ತು ತಿರುವನಂತಪುರ ನಡುವೆ ಪ್ರತಿದಿನ ಕಾಯ್ದಿರಿಸದ ವಿಶೇಷ ರೈಲುಗಳನ್ನು ರೈಲ್ವೆ ಮಂಡಳಿ ಮಂಜೂರು ಮಾಡಿದೆ.
ಈ ರೈಲು ನಿನ್ನೆ(ಶನಿವಾರ) ರಾತ್ರಿ 08.00 ಕ್ಕೆ ತಿರುವನಂತಪುರಂನಿಂದ ಹೊರಟು ಬೆಳಿಗ್ಗೆ 09.30 ಕ್ಕೆ ಮಂಗಳೂರು ತಲುಪಲಿದೆ. ಈ ರೈಲು ಮಂಗಳೂರು ಸೆಂಟ್ರಲ್‍ನಿಂದ ರಾತ್ರಿ 08.05 ಕ್ಕೆ ಹೊರಟು ಮರುದಿನ ಬೆಳಿಗ್ಗೆ 08.30 ಕ್ಕೆ ತಿರುವನಂತಪುರ ತಲುಪಲಿದೆ. ರೈಲು ಕಳಕೂಟಂ, ವರ್ಕಲಾ, ಕೊಲ್ಲಂ, ಕಾಯಂಕುಳಂ, ಚೆಂಗನ್ನೂರು, ಕೊಟ್ಟಾಯಂ, ಎರ್ನಾಕುಳಂ ಟೌನ್, ಆಲುವಾ, ತ್ರಿಶೂರ್, ಶೋರ್ನೂರ್, ತಿರೂರು, ಕೋಝೀಕೋಡ್, ವಡಗರ, ತಲಶ್ಚೇರಿ, ಕಣ್ಣೂರು, ಪಯ್ಯನ್ನೂರ್ ಮತ್ತು ಕಾಸರಗೋಡು ನಿಲ್ದಾಣಗಳಲ್ಲಿ ನಿಲ್ಲುತ್ತದೆ.
ಅಭ್ಯರ್ಥಿಗಳು ತಮ್ಮ ಅಡ್ಮಿಟ್ ಕಾರ್ಡ್ ನ್ನು ಕೌಂಟರ್‍ನಲ್ಲಿ ತೋರಿಸಬೇಕು ಮತ್ತು ಯುಟಿಎಸ್ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.


