HEALTH TIPS

ಹಲೋ..ನಿಮ್ಮ ಕಾಲ್ ರೆಕಾರ್ಡ್ ಆಗುತ್ತಿರಬಹುದು.! ಹೀಗೆ ಪತ್ತೆ ಮಾಡಿ..!

      ನವದೆಹಲಿ : ಇದು ಸ್ಮಾರ್ಟ್ ಫೋನ್ ಗಳ (Smart phone) ಜಮಾನ. ನೀವು ಸ್ಮಾರ್ಟ್ ಫೋನ್ ಬಳಸಿ ಮಾತನಾಡುತ್ತಿದ್ದರೆ ನಿಮ್ಮ ಕಾಲ್ ರೆಕಾರ್ಡ್ ಮಾಡುವುದು ತೀರಾ ಸುಲಭ. ಕೆಲವರು ನಿಮಗೆ ಗೊತ್ತಿಲ್ಲದಂತೆ ಕಾಲ್ ರೆಕಾರ್ಡ್ (Call record) ಮಾಡಬಹುದು. ನಾವು ಹೇಳುವ ಕೆಲವು ಟಿಪ್ಸ್ ಅನುಸರಿಸಿದರೆ, ಕಾಲ್ ರೆಕಾರ್ಡ್ ಆಗುವುದನ್ನು ನೀವು ಪತ್ತೆ ಮಾಡಿ, ಅಲರ್ಟ್ ಆಗಿ ಇರಬಹುದು.


 

       ಹೇಗೆ ಮಾಡುತ್ತಾರೆ ಕಾಲ್ ರೆಕಾರ್ಡ್:
 ಅಂಡ್ರಾಯಿಡ್ ಸ್ಮಾರ್ಟ್ ಫೋನ್ ಗಳಲ್ಲಿ (Smartphones) ವಾಯ್ಸ್ ಕಾಲ್ ರೆಕಾರ್ಡ್ ಮಾಡುವುದು ತೀರಾ ಸುಲಭ. ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಕಾಲ್ ರೆಕಾರ್ಡ್ ವ್ಯವಸ್ಥೆ ಇನ್ ಬಿಲ್ಟ್ ಇರುತ್ತದೆ. ಇನ್ನು ಇನ್ ಬಿಲ್ಟ್ ವ್ಯವಸ್ಥೆ ಇಲ್ಲದೇ ಹೋದರೂ ಕೂಡಾ ಪ್ಲೇ ಸ್ಟೋರ್ ನಿಂದ (Play store) ಆಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಸಾಕಷ್ಟು ಕಾಲ್ ರೆಕಾರ್ಡ್ ಆಪ್ (Recording App)ಗಳು  ಉಚಿತವಾಗಿ ಸಿಗುತ್ತದೆ.  ಒಪ್ಪಿಗೆ ಇಲ್ಲದೆ ಅಥವಾ ಎದುರಿನವರಿಗೆ ತಿಳಿಯದಂತೆ ಕಾಲ್ ರೆಕಾರ್ಡ್ ಮಾಡುವುದು ಒಂದು ರೀತಿಯಲ್ಲಿ ಕಳ್ಳತನ ಮಾಡಿದಂತೆ. ನೀವು ಯಾರೊಂದಿಗಾದರೂ ತೀರಾ ವೈಯುಕ್ತಿಕ ಮಾತುಕತೆ ಮಾಡುತ್ತಿರುವಾಗ ಅವರು ನಿಮಗೆ ಗೊತ್ತಿಲ್ಲದಂತೆ ಕಾಲ್ ರೆಕಾರ್ಡ್ (Call Record) ಮಾಡಿ ಇಟ್ಟುಕೊಂಡರೆ ಅದು ಮುಂದೆ ನಿಮಗೆ ಗಂಭೀರ ಸಮಸ್ಯೆಗಳನ್ನು ತಂದೊಡ್ಡಬಹುದು. ಕೆಲವರು ನಿಮಗೆ ಕಿರಿಕಿರಿ ಮಾಡಬಹುದು. ನಿಮಗೆ ಬ್ಲ್ಯಾಕ್ ಮೇಲ್ ಮಾಡಬಹುದು. ಹಾಗಾಗಿ, ಕಾಲ್ ಮಾಡುವಾಗ ಕೆಲವೊಂದು ವಿಚಾರದಲ್ಲಿ ಎಚ್ಚರ ವಹಿಸಿದರೆ, ನಿಮ್ಮ ಕಾಲ್ ರೆಕಾರ್ಡ್ ಆಗುತ್ತಿದೆಯಾ ಇಲ್ಲವಾ ಎಂಬುದು ನಿಮಗೆ ತಿಳಿಯುತ್ತದೆ. ನೀವು ಅಲರ್ಟ್ ಆಗಿ ಮಾತನಾಡಬಹುದು.

       ಬೀಪ್ ಸೌಂಡ್ ಬಂದರೆ ಇರಲಿಎಚ್ಚರ :

     ಕಾಲ್ ಆರಂಭಿಸುವಾಗ ಕೆಲವು ಸೆಕೆಂಡ್ ಅಥವಾ ಕೆಲವು ನಿಮಿಷ ನಿಮಗೆ ಆ ಕಡೆಯಿಂದ ಬೀಪ್ ಸೌಂಡ್ (Beep sound) ಬಂದರೆ ಖಂಡಿತ ಎಚ್ಚರ ಇರಿ. ಇದರ ಅರ್ಥ ಎದುರು ಕಡೆಯ ವ್ಯಕ್ತಿ ನಿಮ್ಮ ಕಾಲ್ ರೆಕಾರ್ಡ್ ಮಾಡುತ್ತಿದ್ದಾರೆ ಎಂಬುದು. ಕೆಲವೊಮ್ಮೆ ಕಾಲ್ ಮಧ್ಯದಲ್ಲೂ ಬೀಪ್ ಸೌಂಡ್ ಕೇಳುತ್ತದೆ. ಈಗ ಮಾತಿನ ದಾಟಿ ಬದಲಾಯಿಸಿ.  ಕೆಲವರಿಗೆ ಫೋನನ್ನು ಸ್ಪೀಕರ್ ಗೆ (Speaker) ಹಾಕಿ, ಮಾತಾಡುವ ಅಭ್ಯಾಸವಿರುತ್ತದೆ. ಫೋನ್ (Phone) ಸ್ಪೀಕರ್ ಗೆ ಹಾಕಿ, ಮಾತಾಡುವಾಗ ಇನ್ನೊಂದು ಪೋನಿನ ರೆಕಾರ್ಡರ್ ಮೂಲಕ ನಿಮ್ಮ ಸಂಭಾಷಣೆಯನ್ನು ಸುಲಭವಾಗಿ ರೆಕಾರ್ಡ್ ಮಾಡಿಕೊಳ್ಳಬಹುದು. ಇದಕ್ಕೆ ಯಾವ ಆಪ್ ನೆರವು ಕೂಡಾ ಬೇಕಾಗಿಲ್ಲ. ಹಾಗಾಗಿ ಭರವಸೆ ಇಲ್ಲದವರೊಂದಿಗೆ ಮಾತಾಡುವಾಗ ಮತ್ತು ಫೋನ್ ಸ್ಪೀಕರ್ ಮೋಡ್ ಗೆ ಹಾಕಿ ಮಾತಾಡುವವರೊಂದಿಗೆ ಎಚ್ಚರಿಕೆಯಿಂದ ಮಾತಾಡಿ.

        ಕಾಲ್ ರೆಕಾರ್ಡಿಂಗ್ ಗೆ ಇದೆ ಬಹಳಷ್ಟು ಆಪ್ ಗಳು :
     ನೀವು ಕಾಲ್ ಮಾಡುವಾಗ ಎದುರು ಕಡೆಯಿಂದ ಬೇರೆಯ ರೀತಿಯ ಶಬ್ದಗಳು ಕೇಳತೊಡಗಿದರೆ ನೀವು ಅಲರ್ಟ್ (Alert) ಇರಬೇಕು. ಕೆಲವೊಮ್ಮೆ ಮಧ್ಯ ಮಧ್ಯದಲ್ಲೂ ಗಲಾಟೆ ರೀತಿಯ ಶಬ್ದಗಳ ಕೇಳತೊಡಗಿದರೆ, ಅದು ಕಾಲ್ ರೆಕಾರ್ಡ್ ಆಗುತ್ತಿರುವ ಸೂಚನೆ.   ಕೆಲವು ಆಪ್ ಗಳು ಕಾಲ್ ರೆಕಾರ್ಡ್ ಮಾಡುವಾಗ ಬೀಪ್ ಸೌಂಡ್ ಕೇಳುವುದೇ ಇಲ್ಲ. ಅಂಥ ಆಪ್ ಗಳನ್ನು ಈಗ ಅಭಿವೃದ್ಧಿಪಡಿಸಲಾಗಿದೆ. ಅಂಥಾ  ಆಪ್ ಗಳನ್ನು ಬಳಸಿ ಕಾಲ್ ರೆಕಾರ್ಡ್ ಮಾಡುವಾಗ ನಿಮ್ಮ ಅರಿವಿಗೆ ಯಾವ ಮುನ್ಸೂಚನೆ ಕೂಡಾ ಸಿಗುವುದಿಲ್ಲ. ಅಂಥಾ ಆಪ್ ಗಳನ್ನು (App) ನಿಷೇಧ ಮಾಡುವ ಯಾವ ಕಾನೂನು ಕೂಡಾ ನಮ್ಮಲ್ಲಿಲ್ಲ. ಹಾಗಾಗಿ, ಕಾಲ್ ಮಾಡುವಾಗ ಯಾವತ್ತಿಗೂ ಮೈಮರೆತು ಮಾತನಾಡಬೇಡಿ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries