ಕಾಸರಗೋಡು: ಕಾಸರಗೋಡು ಜಿಲ್ಲಾ ಪ್ರಬೇಷನ್ ಕಚೇರಿ ವತಿಯಿಂದ ಜಿಲ್ಲಾ ಕಾನೂನು ಸಹಾಯ ಪ್ರಾಧಿಕಾರ, ನೆಹರೂ ಯುವ ಕೇಂದ್ರ, ಗ್ರೀನ್ ಸ್ಟಾರ್ ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್ ಸೌತ್ ಚಿತ್ತಾರಿ ಸಹಕಾರದೊಂದಿಗೆ ಹೊಸದುರ್ಗ ತಾಲೂಕು ಮಟ್ಟದ ನೇರ್ ವಳಿ ಯೋಜನೆ ಕುರಿತು ಜನಜಾಗೃತಿ ಕಾರ್ಯಕ್ರಮ ಜರುಗಿತು.
ಕಾಸರಗೋಡು ಡಿ.ಎಲ್.ಎಸ್.ಎ. ಕಾರ್ಯದರ್ಶಿ ಎಂ.ಸುಹೈಬ್ ಉದ್ಘಾಟಿಸಿದರು. ಜಿಲ್ಲಾ ಸಮಾಜನೀತಿ ಅಧಿಕಾರಿ ಷೀಬಾ ಮುಂತಾಝಖ್ ಸಿ.ಕೆ.ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡ್ ಜಿಲ್ಲಾ ಜೈಲು ವರಿಷ್ಠಾಧಿಕಾರಿ ಕೆ.ವೇಣು ಪ್ರಧಾನ ಭಾಷಣ ಮಾಡಿದರು. ಹೊಸದುರ್ಗ ರೇಂಜ್ ಸಿವಿಲ್ ಅಬಕಾರಿ ಅಧಿಕಾರಿ ಎ.ದಿಪಿನ್ ಕುಮಾರ್ ಮುಖ್ಯ ಅತಿಥೀಯಾಗಿದ್ದರು. ಪೆÇ್ರಬೇಷನ್ ಟ್ರೈನರ್ ವಿ.ರಾಜನ್, ಪೆÇ್ರಬೇಷನ್ ಸಹಾಯಕ ಬಿ.ಸಲಾವುದ್ದೀನ್ ವಿವಿಧ ವಿಷಯಗಳ ಕುರಿತು ತರಗತಿ ನಡೆಸಿದರು. ಜಿಲ್ಲಾ ಪೆÇ್ರಬೇಷನ್ ಅಧಿಕಾರಿ ಪಿ.ಬಿಜು, ಗ್ರೀನ್ ಸ್ಟಾರ್ ಅಧ್ಯಕ್ಷ ಸಿ.ಕೆ.ಮುಬಶ್ಶೀರ್, ಕಾರ್ಯಕಾರಿ ಸಮಿತಿ ಸದಸ್ಯ ಸಿ.ಕೆ.ಇರ್ಷಾದ್ ಮೊದಲಾದವರು ಉಪಸ್ಥಿತರಿದ್ದರು.





