ಕಾಸರಗೋಡು: ಪಳ್ಳಿಕ್ಕರೆ ಗ್ರಾಮ ಪಂಚಾಯತ್ ನ 65ನೃ ನಂಬ್ರ ಮಠಂ ಕಾಲನಿ ಅಂಗನವಾಡಿಗೆ ಅಗಸರಹೊಳೆ ಶಾಲೆಯ ಬಳಿ 5.5 ಸೆಂಟ್ಸ್ ತಮ್ಮ ಜಾಗವನ್ನು ಉದಾರವಾಗಿ ಒದಗಿಸುವ ಮೂಲಕ ಸ್ಥಳೀಯ ನಿವಾಸಿ ಅಬೂ ಹಾಶಿಂ ಮಟತ್ತಿಲ್ ಮಾದರಿಯಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಸ್ವಂತ ಜಾಗ ಒದಗಿಸುವ ಜಿಲ್ಲಾಡಳಿತದ ಉದ್ದೇಶದೊಂದಿಗೆ ನಡೆಯುವ ಚಟುವಟಿಕೆಗಳ ಪರಿಣಾಮವಾಗಿ ಈ ದೇಣಿಗೆ ನಡೆದಿದೆ. ಡಿ.ಟಿ.ಪಿ.ಸಿ. ಆಂಡ್ ಬಿ.ಆರ್.ಡಿ.ಸಿ. ಮೆನಜರ್ ಸುನಿಲ್ ಕುಮಾರ್, ಸೈಫುದ್ದೀನ್ ಕಳನಾಡು ಎಂಬವರ ಸಕ್ಷದಲ್ಲಿ ಅಬೂ ಹಾಶೀಂ ಅವರು ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ದಾನರೂಪದಲ್ಲಿ ಈ ಜಾಗವನ್ನು ದಾಖಲೆಪತ್ರಗಳ ಮೂಲಕ ಹಸ್ತಾಂತರಿಸಿದರು. ನಿಧನರಾದ ತಮ್ಮ ಸಹೋದರಿ ಬಿಫಾತಿಮಾ(ಬೀವಿ) ಅವರ ಸ್ಮರಣಾರ್ಥ ಈ ಜಾಗವನ್ನು ಒದಗಿಸಿರುವುದಾಗಿ ಅಬೂ ಹಾಶೀಂ ತಿಳಿಸಿದರು. ಈ ಸಂಬಂಧ ಅಭಿನಂದನೆ ಪತ್ರವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಬೂ ಹಾಶಿಂ ಅವರಿಗೆ ಹಸ್ತಾಂತರಿಸಿದರು. ಪಳ್ಳಿಕ್ಕರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬೂಬಕ್ಕರ್ ಹಾಸಿ ಮಠತ್ತಿಲ್ ಅವರ ಪುತ್ರ ಹಾಶಿಂ.





