ಕಾಸರಗೋಡು: ಇತರ ಜಿಲ್ಲೆಗಳಿಂದ ಮತದಾತರನ್ನು ಸಾಮೂಹಿಕವಾಗಿ ಕರೆತರುವ ಯತ್ನಕ್ಕೆ ತಡೆ ಮಾಡಲಾಗುವುದು. ಕಾಸರಗೋಡು ಜಿಲ್ಲೆಯಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ತಂಡ ಈ ನಿಟ್ಟಿನಲ್ಲಿ ತಪಾಸಣೆ ಆರಂಭಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಕರ್ನಾಟಕದ ಗಡಿಗಳಾಗಿರುವ 17 ಚೆಕ್ ಪೆÇೀಸ್ಟ್ ಗಳಲ್ಲಿ, ಕಣ್ಣೂರು ಜಿಲ್ಲೆಯ ಗಡಿಯಾಗಿರುವ 3 ಚೆಕ್ ಪೆÇೀಸ್ಟ್ ಗಳಲ್ಲಿ ಈ ತಂಡಗಳು ಕರ್ತವ್ಯದಲ್ಲಿವೆ. ಒಬ್ಬ ಮೆಜಿಸ್ಟ್ರೇಟ್, ಒಬ್ಬ ವೀಡಿಯೋಗ್ರಾಫರ್, 4 ಮಂದಿ ಪೆÇಲೀಸ್ ಸಿಬ್ಬಂದಿ ಸಹಿತ ಇರುವ ತಂಡಗಳನ್ನು ರಚಿಸಲಾಗಿದೆ. ಕಾಸರಗೋಡು ಜಿಲ್ಲೆಯ ವಿವಿಧ ಚೆಕ್ ಪೆÇೀಸ್ಟ್ ಗಳಲ್ಲಿ ಇವರು ತಪಾಸಣೆ ನಡೆಸುವರು.ಒಟ್ಟು 16 ವೀಡಿಯೋ ಸರ್ವೆಲೆನ್ಸ್ ತಂಡಗಳು ಇರುವುವು. ಶಾಂತಿ ಪಾಲನೆಗಾಗಿ 96 ಸದಸ್ಯರಿರುವ 2 ತುಕಡಿ ಕಾವಲು ಪಡೆ ಜಿಲ್ಲೆಗೆ ಆಗಮಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಶೇ 50 ಮತಗಟ್ಟೆಗಳಲ್ಲಿ ವೀಡಿಯೋ ಕಾಸ್ಟಿಂಗ್ ಸೌಲಭ್ಯ ಒದಗಿಸಲಾಗುವುದು. ಇಲ್ಲಿ ಮೈಕ್ರೋ ಒಬ್ಸರ್ ವರ್ ಗಳೂ ಇರುವರು. ಕೇಂದ್ರ ಸರಕಾರಿ ಸಿಬ್ಬಂದಿಗಳು ಮೈಕ್ರೋ ಒಬ್ಸರ್ ವರ್ ಗಳಾಗಿರುವರು. ಜಿಲ್ಲೆಯಲ್ಲಿ 44 ಕ್ರಿಟಿಕಲ್ ಮತಗಟ್ಟೆಗಳು, 49 ವಲ್ನರಬಲ್ ಮತಗಟ್ಟೆಗಳು ಇವೆ. ಮತಗಟ್ಟೆಗಳಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಆಹಾರ ಮತ್ತು ನೀರು ಸರಬರಾಜು ಹೊಣೆಯನ್ನು ಕುಟುಂಬಶ್ರೀಗೆ ನೀಡಲಾಗಿದೆ ಎಂದರು.
ಚುನಾವಣೆಯ ಪೂರ್ವಭಾವಿಯಾಗಿ ಕರ್ತವ್ಯದ ಸಿಬ್ಬಂದಿಗೆ ಕೋವಿಡ್ ವಾಕ್ಸಿನೇಷನ್ ಸೌಲಭ್ಯಕ್ಕೆ ಸಜ್ಜೀಕರಣ ಪೂರ್ಣಗೊಂಡಿದೆ. ಮತಗಟ್ಟೆಗಳಲ್ಲಿ ಮೂರು ಸಾಲುಗಳಿರುವುವು. ಪುರುಷರಿಗೆ, ಮಹಿಳೆಯರಿಗೆ, ಟ್ರಾನ್ಸ್ ಜೆಂಡರ್ ಮತ್ತು ವಯೋವೃದ್ಧರಿಗೆ ಪ್ರತ್ಯೇಕ ಸಾಲುಗಳಿರುವುವು.
ಚುನಾವಣೆ ಸಂಬಂಧ ಯಾವುದೇ ಸಂಶಯಗಳಿದ್ದಲ್ಲಿ 1950, 04994-255323, 04994-255324, 04994-255325 ಎಂಬ ದೂರವಾಣಿ ಸಂಖ್ಯೆಗಳಿಗೆ ಕರೆಮಾಡಬಹುದು. ರಾಜಕೀಯ ಪಕ್ಷಗಳಿಗೆ ಪ್ರಚಾರಕ್ಕಾಗಿ ಮೈದಾನಗಳನ್ನು ಮಂಜೂರು ಮಾಡುವ ನಿಟ್ಟಿನಲ್ಲಿ ಇ-ಸುವಿದಾ ಪೆÇೀರ್ಟಲ್ ಬಳಸಬಹುದು ಎಂದವರು ನುಡಿದರು.
ಒಟ್ಟು ಮತದಾತರು
ಕಾಸರಗೋಡು ಜಿಲ್ಲೆಯ ಜನಸಂಖ್ಯೆ(2011ರ ಪ್ರಕಾರ): 1307375.
ನಿರೀಕ್ಷಿತ ಜನಸಂಖ್ಯೆ (2021) : 1402929.
ಒಟ್ಟು ಮತದಾತರು: 1035042 ಸರ್ವೀಸ್ ಮತದಾತರು-1613.
ಪುರುಷರು-505798.
ಮಹಿಳೆಯರು-529241.
ತೃತೀಯ ಲಿಂಗಿಗಳು-3.




