HEALTH TIPS

ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಜಲಯೋಧ (ವಾಟರ್ ವಾರಿಯರ್) ಪುರಸ್ಕಾರ


          ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಳೆನೀರು ಕೊಯ್ಲು ಮೂಲಕ ವಿವಿಧ ವಿಧಾನಗಳ ಮುಖೇನ ನೀರಿನ ಕ್ಷಾಮ ಪರಿಹಾರಕ್ಕೆ ನಡೆಸಿದ ಮಾದರಿ ಯತ್ನಗಳನ್ನು ಪರಿಶೀಲಿಸಿ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಜಲಯೋಧ (ವಾಟರ್ ವಾರಿಯರ್) ಪುರಸ್ಕಾರ ಸಂದಿದೆ.  ಜಿಲ್ಲಾಧಿಕಾರಿ ಅವರ ಜೊತೆಗೆ ಕಾಸರಗೋಡು ಜಿಲ್ಲೆಯ ಕುಂಡಂಕುಳಿ ನಿವಾಸಿ ಕುಂಞಂಬು ಅವರಿಗೂ ಈ ಪುರಸ್ಕಾರ ಲಭಿಸಿದೆ. 


        ವಿಶ್ವ ಜಲ ದಿನಾಚರಣೆಯ ಅಂಗವಾಗಿ ಮಾ.20ರಂದು ಸಂಜೆ 6 ಗಂಟೆಗೆ ಪಾಲಕ್ಕಾಡ್ ಧೋನಿ ಎಂಬಲ್ಲಿನ ಲೀಡ್ ಕಾಲೇಜು ಆಪ್ ಮೆನೆಜ್ ಮೆಂಟ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ನಡೆಯಲಿದೆ. ಪುರಸ್ಕಾರವು ಸ್ಮರಣಿಕೆ ಮತ್ತು ಅರ್ಹತಾಪತ್ರ ಹೊಂದಿದೆ. 

       ಜಲಸಂರಕ್ಷಣೆ ಚಟುವಟಿಕೆಗಳಲ್ಲಿ ಇವರ ಸಹಿತ 5 ಮಂದಿ ನಡೆಸಿರುವ ಅವಿರತ ಯತ್ನವನ್ನು ಪ್ರಧಾನವಾಗಿಸಿ ಚಿತ್ರೀಕರಿಸಿದ "ರೈನ್ ವಾಟರ್ ದಿ ಗ್ರೇಟೆಸ್ಟ್ ಗಿಫ್ಟ್ " ಎಂಬ ವಿನೋದ್ ಮಂಗರ ಅವರ ಚಿತ್ರದ ಪ್ರದರ್ಶನ ಈ ವೇಳೆ ಜರಗಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries