ಕರ್ನಾಟಕ ಸರ್ಕಾರವು ರಾಜ್ಯ ಪ್ರವೇಶಿಸುವ ಪ್ರಯಾಣಿಕರಿಗೆ ಕೋವಿಡ್ ಅರ್.ಟಿ.ಪಿ.ಸಿ.ಅರ್. ನೆಗೆಟಿವ್ ವರದಿ ಕಡ್ಡಾಯಗೊಳಿಸಿದ್ದರ ಭಾಗವಾಗಿ ಇಂದಿನಿಂದ ಅಂತರ್ ರಾಜ್ಯ ಗಡಿ ತಲಪಾಡಿಯಲ್ಲಿ ಪರಿಶೀಲನೆ ಬಿಗುಗೊಳಿಸಲಾಗಿದೆ. ಇಂದು ಬೆಳಿಗ್ಗೆ ತಲಪಾಡಿಯಲ್ಲಿ ಅಧಿಕಾರಿಗಳು ವಾಹನಗಳನ್ನು ತಡೆಹಿಡಿದು ಪರಿಶೀಲನೆಗೆ ಮುಂದಾಗಿರುವುದು ಕಂಡುಬಂದಿದೆ. ಇದರ ಪರಿಣಾಮ ಬೃಹತ್ ಸಂಖ್ಯೆಯಲ್ಲಿ ವಾಹನ ದಟ್ಟಣೆ ಕಂಡುಬಂದಿದೆ. ಅನೇಕ ಪ್ರಯಾಣಿಕರಲ್ಲಿ ವರದಿ ಇಲ್ಲದ್ದರಿಂದ ಮರಳಬೇಕಾದ ಸ್ಥಿತಿ ಉಂಟಾಯಿತು.


