HEALTH TIPS

ದೇಶದಲ್ಲಿ ಬ್ರಿಟನ್‌, ದಕ್ಷಿಣ ಆಫ್ರಿಕಾ, ಬ್ರೆಜಿಲ್‌ ಮಾದರಿಯ 400 ಕೋವಿಡ್‌ ಪ್ರಕರಣ

             ನವದೆಹಲಿ: ಬ್ರಿಟನ್‌, ದಕ್ಷಿಣ ಆಫ್ರಿಕಾ, ಬ್ರೆಜಿಲ್‌ ಮಾದರಿಯ ಕೋವಿಡ್‌ ಪ್ರಕರಣಗಳು ಭಾರತದಲ್ಲಿ 400ಕ್ಕೆ ಏರಿಕೆಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.


       ಗುರುವಾರ ದೇಶದಲ್ಲಿ ಒಟ್ಟು 35,871 ಪ್ರಕರಣಗಳು ವರದಿಯಾದವು. ನೂರು ದಿನಗಳಲ್ಲಿ ವರದಿಯಾದ ದಾಖಲೆಯ ಸಂಖ್ಯೆಯ ಪ್ರಕರಣಗಳಿವು. ಇದರೊಂದಿಗೆ ದೇಶದ ಒಟ್ಟಾರೆ ಸೋಂಕಿನ ಸಂಖ್ಯೆ 1,14,74,605 ಏರಿಕೆಯಾಗಿದೆ.

            ಸತತ ಎಂಟು ದಿನಗಳಲ್ಲಿ ಕೋವಿಡ್‌ ಪ್ರಕರಣಗಳು ಏರುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಗುರುವಾರದ ಹೊತ್ತಿಗೆ 2,52,364ಕ್ಕೆ ತಲುಪಿದೆ. ಒಟ್ಟಾರೆ ಸೋಂಕು ಪ್ರಕರಣಗಳಲ್ಲಿ ಇದು ಶೇ. 2.20ರಷ್ಟು ಆಗಿದೆ. ಇನ್ನು ಗುಣಮುಖರಾಗುವವರ ಪ್ರಮಾಣ ಶೇ. 96.41 ರಷ್ಟು ಇದೆ ಎಂದು ಆರೋಗ್ಯ ಇಲಾಖೆಯ ವೆಬ್‌ಸೈಟ್‌ನಿಂದ ಗೊತ್ತಾಗಿದೆ.

         ಗುರುವಾರ ವರದಿಯಾದ 172 ಸಾವುಗಳೊಂದಿಗೆ ದೇಶದಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆ 1,59,216 ಕ್ಕೆ ಏರಿಕೆಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries