ಬೆಂಗಳೂರು: ಕೊರೋನಾ ರೋಗಿಗಳಲ್ಲಿ ಶ್ವಾಸಕೋಶದ ಸೋಂಕಿನ ತೀವ್ರತೆಯನ್ನು ಗುರುತಿಸಲು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಸಂಶೋಧಕರು 'ಅನಾಮ್‍ನೆಟ್' (AnamNet) ಎಂಬ ಸಾಫ್ಟ್‍ವೇರ್ ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ.
ಓಸ್ಲೋ ಯೂನಿವರ್ಸಿಟಿ ಹಾಸ್ಪಿಟಲ್ ಮತ್ತು ನಾರ್ವೆಯ ಆಗ್ಡರ್ ವಿಶ್ವವಿದ್ಯಾಲಯದ ಸಹೋದ್ಯೋಗಿಗಳ ಸಹಯೋಗದೊಂದಿಗೆ ಐಐಎಸ್ಸಿಯಲ್ಲಿ ಕಂಪ್ಯೂಟೇಶನಲ್ ಮತ್ತು ಡಾಟಾ ಸೈನ್ಸ್ (ಸಿಡಿಎಸ್) ಹಾಗೂ ಇನ್ಸ್ಟ್ರುಮೆಂಟೇಶನ್ ಮತ್ತು ಅಪ್ಲೈಡ್ ಫಿಸಿಕ್ಸ್ ವಿಭಾಗಗಳ ಸಂಶೋಧಕರುಐಇಇಇ ಟ್ರಾನ್ಸಾಕ್ಷನ್ಸ್ ಆನ್ ನ್ಯೂರಲ್ ನೆಟ್‍ವಕ್ರ್ಸ್ ಮತ್ತು ಕಲಿಕೆ ವ್ಯವಸ್ಥೆಗಳ ಕುರಿತು ಅಧ್ಯಯನ ನಡೆಸಿದ್ದಾರೆ.
ವಿಶಿಷ್ಟವಾದ ನ್ಯೂರಲ್ ನೆಟ್ವರ್ಕ್ ಹಾಗೂ ಇಮೇಜ್ ಸಂಸ್ಕರಣಾ ತಂತ್ರಗಳನ್ನು ಬಳಸಿ,ಅನಾಮ್‍ನೆಟ್ ನಿನಿರ್ದಿಷ್ಟ ಅಸಹಜ ಕ್ರಿಯೆಯನ್ನು ಶೋಧಿಸುತ್ತದೆ. ಅಲ್ಲದೆ ಶ್ವಾಸಕೋಶದಲ್ಲಿ ಉಂಟಾದ ಹಾನಿಯನ್ನು ಅಂದಾಜು ಮಾಡುತ್ತದೆ. ಎದೆಯ ಸಿಟಿ ಸ್ಕ್ಯಾನ್‍ನಲ್ಲಿ ಸೋಂಕಿತ ಜಾಗಗಳನ್ನು ಹೆಚ್ಚಿನ ಮಟ್ಟದ ನಿಖರತೆಯೊಂದಿಗೆ ಗುರುತಿಸುತ್ತದೆ. ಸ್ಕ್ಯಾನ್ ಅನ್ನು 'ಸೋಂಕಿತ' ಮತ್ತು 'ಸೋಂಕಿತವಲ್ಲದ' ಎಂದು 'ವಿಭಾಗ' ಮಾಡಲು ಸಾಫ್ಟ್‍ವೇರ್ ಸಹಕಾರಿಯಾಗಿದೆ.
ಇದು ಮೂಲತಃ ಎದೆಯ ಸಿಟಿ ಚಿತ್ರಗಳಿಂದ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತದೆ.ಅವುಗಳನ್ನು ರೇಖಾತ್ಮಕವಲ್ಲದ ಜಾಗದಲ್ಲಿ ತೋರಿಸುತ್ತದೆ. ಈ ಆಧಾರದ ಮೇಲೆ ಚಿತ್ರವನ್ನು ಮರುಸೃಷ್ಟಿಸುತ್ತದೆ. ಇದನ್ನು ಅನಾಮೊರ್ಫಿಕ್ ಇಮೇಜ್ ಪೆÇ್ರಸೆಸಿಂಗ್ ಎಂದು ಕರೆಯಲಾಗುತ್ತದೆ, ಎಂದು ಸಿಡಿಎಸ್‍ನ ಸಹಾಯಕ ಪ್ರಾಧ್ಯಾಪಕ ಫಣೀಂದ್ರ ಕೆ. ಯಲವರ್ತಿ ಹೇಳಿದ್ದಾರೆ. "ನಾವು ಪ್ರಸ್ತುತ ನಮ್ಮ ಸಾಫ್ಟ್‍ವೇರ್ ಅನ್ನು ಕೊರೋನಾ ಸ್ಕ್ಯಾನ್‍ಗಳನ್ನು ನಿರ್ವಹಿಸಲು ಹೆಚ್ಚು ದೃಢವಾಗಿ ಮಾಡುವತ್ತ ಗಮನ ಹರಿಸಿದ್ದೇವೆ, ಆದರೆ ಭವಿಷ್ಯದಲ್ಲಿ ನ್ಯುಮೋನಿಯಾ, ಫೈಬ್ರೋಸಿಸ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಂತಹಾ ಇತರ ಸಾಮಾನ್ಯ ಶ್ವಾಸಕೋಶದ ಕಾಯಿಲೆಗಳಿಗೂ ವಿಸ್ತರಿಸಲು ಮುಂದಾಗಲಿದ್ದೇವೆ."
ಲೈಟ್ ಸಾಫ್ಟ್‍ವೇರ್ ಆಗಿರುವುದರಿಂದ, ಅನಾಮ್ ನೆಟ್ ಗೆ ಒಂದು ಚಿಕ್ಕ ಮೆಮೊರಿ ಸ್ಪೇಸ್ ಸಾಕಾಗುತ್ತದೆ ಡೆವಲಪರ್‍ಗಳು ಅovSegಎಂಬ ಅಪ್ಲಿಕೇಶನ್ ಅನ್ನು ಸಹ ರಚಿಸಿದ್ದಾರೆ ಇದರಿಂದ ಆರೋಗ್ಯ ವೃತ್ತಿಪರರು ತಮ್ಮ ಸ್ಮಾರ್ಟ್‍ಫೆÇೀನ್‍ಗಳಲ್ಲಿನ ಡೇಟಾವನ್ನು ಪ್ರವೇಶಿಸಬಹುದಾಗಿದೆ.





