ತಿರುವನಂತಪುರ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಮುದ್ರಕ್ಕೆ ಜಿಗಿಯುವುದನ್ನು ಕನ್ಯಾಕುಮಾರಿ ತೇಂಞ ಪಟ್ಟಣದಲ್ಲಿ ರಾಹುಲ್ ಗಾಂಧಿ ಸಮುದ್ರದತ್ತ ತೆರಳುತ್ತಿದ್ದಾಗ ಅವರನ್ನು ತಡೆಹಿಡಿಯಲಾಯಿತು. ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಜಿಲ್ಲಾಡಳಿತ ಈ ನಿಷೇಧ ಹೇರಿತು.
ರಾಹುಲ್ ಗಾಂಧಿ ಸಮುದ್ರದಲ್ಲಿ ಈಜಾಡಿದ ಮೊನ್ನೆಯ ಘಟನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದರು. ರಾಹುಲ್ ಗಾಂಧಿ ಉತ್ತಮ ಪ್ರವಾಸಿ ಎಂದು ಪಿಣರಾಯಿ ವಿಜಯನ್ ಗೇಲಿ ಮಾಡಿದ್ದರು. ಪ್ರವಾಸಿಗರು ವಿಶ್ವದ ವಿವಿಧ ಭಾಗಗಳ ಶಾಂತ ಸಮುದ್ರಗಳಲ್ಲಿ ಈಜಾಡುವ ಕ್ರಮವಿದೆ. ಆದರೆ ಕೇರಳ ಸಮುದ್ರವನ್ನು ಈಜಲು ಅಷ್ಟು ಸುಲಭವಲ್ಲ.ಆದರೆ ರಾಹುಲ್ ಅವರ ಮೋಜಿನಾಟ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಸಹಾಯಕರವಾಗಿದೆ. ರಾಜಕೀಯ ಪರಿಸ್ಥಿತಿಯನ್ನು ಪ್ರಸ್ತಾಪಿಸಿ ಕೇರಳದ ಸಮುದ್ರವನ್ನು ಶಾಂತವೆಂದು ಪರಿಗಣಿಸಬಾರದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದರು.
ಏತನ್ಮಧ್ಯೆ, ಬಿಜೆಪಿ ರಾಜ್ಯ ಅಧ್ಯಕ್ಷ ಕೆ ಸುರೇಂದ್ರನ್ ಅವರೂ ರಾಹುಲ್ ವಿರುದ್ಧ ಟೀಕೆ ವ್ಯಕ್ತಪಡಿಸಿ "ರಾಹುಲ್ ಗಾಂಧಿüಯವರು ಆ ಪಕ್ಷದ ಸಾಂಕೇತಿಕ ನಡೆ ಎಂದು ನನಗೆ ತೋರುತ್ತದೆ. ಕಾಂಗ್ರೆಸ್ ನ ಹಾದಿ ನೆಲಕ್ಕಚ್ಚುತ್ತಿದೆ. ಆದ್ದರಿಂದ ರಾಹುಲ್ ಗಾಂಧಿ ಈಜುವುದನ್ನು ಕಲಿಯಬೇಕಾಗಿದೆ. ಮುಖ್ಯಮಂತ್ರಿ ಹೇಳಿದಂತೆ ನಾನು ಹೇಳುತ್ತಿಲ್ಲ. ಕೇರಳದಲ್ಲಿ ರಾಹುಲ್ ಗಾಂಧಿ ಪಕ್ಷವನ್ನು ಸಂಪೂರ್ಣ ಮುಳುಗಿಸಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿರುವರು.






