ಹೈದರಾಬಾದ್: ಮೆರ್ಮೇಯ್ಡ್ ಸಿಂಡ್ರೋಮ್, ಅಥವಾ ಸೈರೆನೋಮೆಲಿಯಾ ನೊಂದಿಗೆ ಹುಟ್ಟಿದ ಮಗು ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ.
ಹೈದರಾಬಾದ್ ನಲ್ಲಿ ಈ ಘಟನೆ ವರದಿಯಾಗಿದ್ದು, ಆಸ್ಪತ್ರೆಯಲ್ಲಿ ಹುಟ್ಟಿದ ಮಗು ಕೇವಲ 2 ಗಂಟೆಗಳಲ್ಲಿ ಸಾವನ್ನಪ್ಪಿದೆ.
ಮೆರ್ಮೇಯ್ಡ್ ಸಿಂಡ್ರೋಮ್, ಅಥವಾ ಸೈರೆನೋಮೆಲಿಯಾ, ಅತ್ಯಂತ ಅಪರೂಪದ ಆದರೆ ಗಂಭೀರವಾದ ಜನ್ಮಜಾತ ಸ್ಥಿತಿಯಾಗಿದೆ. ಮಗುವಿನ ಕಾಲುಗಳು ಬೆಸೆಯಲ್ಪಟ್ಟಿರುತ್ತವೆ.
ಸಂಜೆ 7 ಗಂಟೆಗೆ ಹುಟ್ಟಿದ ಮಗುವಿಗೆ ವಿರೂಪಗಳು ತೀವ್ರವಾಗಿ ಬಾಧಿಸಿದ್ದರಿಂದ ಸಾವನ್ನಪ್ಪಿದೆ. ಮಗುವಿನ ನ್ಯೂನತೆಗಳನ್ನು ಗರ್ಭಾವಸ್ಥೆಯಲ್ಲಿಯೇ ಕಂಡುಹಿಡಿಯುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಕಾರಣದಿಂದಾಗಿ ಈ ಪ್ರಕರಣ ಸಂಕೀರ್ಣಗೊಂಡಿತ್ತು.





