HEALTH TIPS

ಹೃದಯ ಹಿಂಡುವ ದೃಶ್ಯ: ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಪೋಷಕರು, ಹಸುಗೂಸನ್ನು ಸಂತೈಸಿದ ಹೋಂಗಾರ್ಡ್

         ತಿರುವನಂತಪುರಂ: ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ಪೋಷಕರು ದಾಖಲಾಗಿದ್ದು ಅಳುತ್ತಿದ್ದ 7 ತಿಂಗಳ ಮಗುವನ್ನು ಹೋಂ ಗಾರ್ಡ್ ಒಬ್ಬರು ಸಂತೈಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.


         ತಿರುವನಂತಪುರಂನ ಕಾಯಂಕುಲಂನ ರಾಮಪುರಂನಲ್ಲಿ ತಮ್ಮ ಏಳು ತಿಂಗಳ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ದಂಪತಿಯ ಕಾರು ಅಪಘಾತಕ್ಕೀಡಾಗಿದ್ದು ಅಪಘಾತದಲ್ಲಿ ಗಾಯಗೊಂಡಿದ್ದ ಪೋಷಕರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

      ಈ ವೇಳೆ ಅಪಾಯದಿಂದ ಪಾರಾಗಿದ್ದ ಮಗು ಅಳುತ್ತಿದ್ದುದ್ದನ್ನು ಕಂಡ ಹೋಂ ಗಾರ್ಡ್ ಕೆಎಸ್ ಸುರೇಶ್ ಎಂಬುವರು ಎತ್ತಿಕೊಂಡು ಸಂತೈಸಿದ್ದಾರೆ. ಈ ವಿಡಿಯೋವನ್ನು ಕೇರಳದ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಈ ವಿಡಿಯೋ ನೋಡಿದ ನೆಟ್ಟಿಗರು ಭಾವನಾತ್ಮಕ ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಸುರೇಶ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

       ದಂಪತಿಯ ಸಂಬಂಧಿಕರು ಬರುವವರೆಗೂ ಸುರೇಶ್ ಅವರು ಹೆಣ್ಣುಮಗುವನ್ನು ಸಂತೈಸಿದ್ದರು. ಇದನ್ನು ಕಂಡ ಕೆಲ ಸ್ಥಳೀಯರು ವಿಡಿಯೋ ಮಾಡಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries