ಒಡಿಶಾ: ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಮಾ.05 ರಂದು ಘನ ಇಂಧನ ನಾಳ ಹೊಂದಿರುವ ರಾಮ್ಜೆಟ್ (ಎಸ್ಎಫ್ ಡಿಆರ್) ತಂತ್ರಜ್ಞಾನವನ್ನು ಒಡಿಶಾದಲ್ಲಿ ಯಶಸ್ವಿಗೊಳಿಸಿದೆ.
ನಿನ್ನೆ ಬೆಳಿಗ್ಗೆ 10:30 ಕ್ಕೆ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ಲಾಂಚ್ ಪ್ಲಾಟ್ ಫಾರ್ಮ್ ನಿಂದ ಪರೀಕ್ಷೆ ನಡೆದಿದೆ ಎಂದು ಡಿಆರ್ ಡಿಒ ಮೂಲಗಳು ತಿಳಿಸಿವೆ.
ಎಸ್ ಎಫ್ ಡಿಆರ್ ಯಶಸ್ವಿ ಪ್ರಯೋಗದಿಂದಾಗಿ ದೂರಗಾಮಿ ಏರ್ ಟು ಏರ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುವುದಕ್ಕೆ ಡಿಆರ್ ಡಿಒಗೆ ಸಾಧ್ಯವಾಗಲಿದೆ. ಪರೀಕ್ಷಾರ್ಥ ಪ್ರಯೋಗದ ವೇಳೆ ಎಲ್ಲಾ ವ್ಯವಸ್ಥೆಗಳೂ ನಿರೀಕ್ಷೆಯಂತೆಯೇ ಫಲಪ್ರದವಾಗಿದೆ ಎಂದು ಡಿಆರ್ ಡಿಒ ಅಧಿಕಾರಿಗಳು ತಿಳಿಸಿದ್ದಾರೆ.