ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಕಸ್ಟಮ್ಸ್ ತನ್ನನ್ನು ಕರೆಸಿಕೊಂಡಿದೆ ಎಂಬ ಸುದ್ದಿಯನ್ನು ಕೊಡಿಯೇರಿ ಬಾಲಕೃಷ್ಣನ್ ಅವರ ಪತ್ನಿ ವಿನೋದಿನಿ ನಿರಾಕರಿಸಿದ್ದಾರೆ. ತನಗೆ ಯುನಿಟೆಕ್ ಮಾಲೀಕ ಸಂತೋಷ್ ಈಪನ್ ಯಾರೆಂದು ಗೊತ್ತಿಲ್ಲ ಮತ್ತು ತನಗೆ ಐಪೋನ್ ನೀಡಿಲ್ಲ ಎಂದು ವಿನೋದಿನಿ ಹೇಳಿಕೆ ನೀಡಿರುವರು.
ಲೈಫ್ ಮಿಷನ್ ಯೋಜನೆಯ ಗುತ್ತಿಗೆದಾರ ಯುನಿಟಾಕ್ ಮಾಲೀಕ ಸಂತೋಷ್ ಈಪನ್ ಖರೀದಿಸಿದ ಐಪೋನ್ ಗಳಲ್ಲಿ ಒಂದನ್ನು ವಿನೋದಿನಿ ಬಳಸಿದ್ದಾರೆ ಎಂದು ಕಸ್ಟಮ್ಸ್ ಕಂಡುಹಿಡಿದಿದೆ. ಇದರ ಆಧಾರದ ಮೇಲೆ ಅವರನ್ನು ಮುಂದಿನ ವಾರ ಕಸ್ಟಮ್ಸ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಆದರೆ ಪ್ರಶ್ನಿಸಲು ಕಸ್ಟಮ್ಸ್ ತನಗೆ ಕರೆ ಮಾಡಿಲ್ಲ ಎಂದು ವಿನೋದಿನಿ ಹೇಳಿಕೊಂಡಿದ್ದಾರೆ.
ಸಂತೋಷ್ ಈಪನ್ ಸ್ವಪ್ನಾ ಸುರೇಶ್ ಅವರ ಸೂಚನೆಯಂತೆ ಆರು ಐ-ಪೋನ್‍ಗಳನ್ನು ಖರೀದಿಸಿದ್ದರು. ಅವುಗಳಲ್ಲಿ ಐದನ್ನು ಕಸ್ಟಮ್ಸ್ ಈಗಾಗಲೇ ಪತ್ತೆಹಚ್ಚಿದೆ. ಆದರೆ ಆರನೇ ಐ ಪೋನ್ ನ್ನು ಯಾರು ಬಳಸುತ್ತಿದ್ದಾರೆಂದು ಕಸ್ಟಮ್ಸ್ ಗೆ ಕಂಡುಹಿಡಿಯಲಾಗಲಿಲ್ಲ. ಸಂತೋಷ್ ಈಪನ್ ಪ್ರಕಾರ, ಪೋನ್ ಬೆಲೆ 1.3 ಲಕ್ಷ ರೂ.ಗಳದ್ದಾಗಿದೆ. ಅದನ್ನೇ ಈಗ ಕಸ್ಟಮ್ಸ್ ಪತ್ತೆಹಚ್ಚಿದೆ. ಕೊಡಿಯೇರಿ ಬಾಲಕೃಷ್ಣನ್ ಅವರ ಪತ್ನಿ ವಿನೋದಿನಿ ಕೊಡಿಯೇರಿ ಆ ಐ-ಪೋನ್ ಬಳಸುತ್ತಿದ್ದಾರೆ.





