ಕುಂಬಳೆ: ನಾಯ್ಕಾಪು ಸಮೀಪದ ದರ್ಬಾರ್ ಕಟ್ಟೆ ಮುಂಡಪ್ಪಳ್ಳ ಶ್ರೀರಾಜರಾಜೇಶ್ವರಿ ದೇವಸ್ಥಾನದ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಚಂಡಿಕಾ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರ ನೆರವೇರಿತು.
ಈ ಸಂದರ್ಭ ಕ್ಷೇತ್ರಾಡಳಿತ ಸಮಿತಿಯ ಕೆ.ಕೆ.ಶೆಟ್ಟಿ, ಕೃಷ್ಣಪ್ರಸಾದ್ ರೈ, ಮಂಜುನಾಥ ಆಳ್ವ ಮಡ್ವ, ಜಯಪ್ರಸಾದ್ ರೈ ಕಾರಿಂಜ, ಶಿವರಾಮ ಆಳ್ವ ಮೊದಲಾದವರು ಉಪಸ್ಥಿತರಿದ್ದರು.


